ಪೈರಸಿ ವಿರುದ್ಧ ‘ಹೀರೋ’ ರಿಷಬ್ ಆಕ್ರೋಶ

ಬೆಂಗಳೂರು, ಮಾರ್ಚ್ 08, 2021 (www.justkannada.in): ಪೈರಸಿ ವಿರುದ್ಧ ‘ಹೀರೋ’ ರಿಷಬ್ ಶೆಟ್ಟಿ ಆಕ್ರೋಶ ಪಡಿಸಿದ್ದಾರೆ.

ಹೀರೋ ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿರುವ ಬೆನ್ನಲ್ಲೇ ಪೈರಸಿ ಕಾಟದ ವಿರುದ್ಧ ರಿಷಬ್ ಶೆಟ್ಟಿ ಸಿಟ್ಟಾಗಿದ್ದಾರೆ.

ವಿಡಿಯೋ ಮೂಲಕ ರಿಷಬ್ ಆಕ್ರೋಶ ಹೊರಹಾಕಿದ್ದಾರೆ. ಇದರ ವಿರುದ್ಧ ಯಾವುದಾದರೂ ಕಠಿಣ ಕ್ರಮ ಕೈಗೊಳ್ಳಲೇಬೇಕು ಎಂದು ಒತ್ತಾಯಿಸಿದ್ದಾರೆ.

ವೆಬ್ ಸೈಟ್ ಗಳಿಂದ ಪೈರಸಿ ಕಾಪಿಗಳನ್ನು ತೆಗೆಯಲಾಗುತ್ತಿದೆ. ಆದರೆ, ನಿರಂತರವಾಗಿ ಪೈರಸಿ ಹರಿದಾಡುತ್ತಿವೆ. ಹೀಗಾದರೆ, ಚಿತ್ರಮಂದಿರಗಳ ಜವಾಬ್ದಾರಿ ಏನು ಎಂದು ರಿಷಬ್ ಪ್ರಶ್ನಿಸಿದ್ದಾರೆ.