ಮೈಸೂರಿನಲ್ಲಿ ಹೀಲಿಯಂ ಸ್ಫೋಟ ಕೇಸ್: ಸಾವಿನ ಸಂಖ್ಯೆ ಎರಡಕ್ಕೆ ಏರಿಕೆ

ಮೈಸೂರು,ಡಿಸೆಂಬರ್,26,2025 (www.justkannada.in):  ಮೈಸೂರು ಅರಮನೆ ಮುಂಭಾಗ ಹೀಲಿಯಂ ಸಿಲಿಂಡರ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾವಿನ ಸಂಖ್ಯೆ ಎರಡಕ್ಕೆ ಏರಿಕೆಯಾಗಿದೆ.

ಘಟನೆಯಲ್ಲಿ ಗಂಭೀರ ಗಾಯಗೊಂಡು ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆ ಮಂಜುಳ ಎಂಬುವವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಬೆಂಗಳೂರಿನ ಕಾಮಾಕ್ಷಿಪಾಳ್ಯ ನಿವಾಸಿ ಮಂಜುಳಾ ಅವರು ಮೂಲತಃ ಮಂಡ್ಯದ ಕಲ್ಲಹಳ್ಳಿ‌ ಗ್ರಾಮದ ನಿವಾಸಿ ರಾಜೇಶ್ ಪತ್ನಿ. ನಿನ್ನೆ ಹೀಲಿಯಂ ಸಿಲಿಂಡರ್ ಸ್ಪೋಟದಿಂದ ಗಂಭೀರ ಗಾಯಗೊಂಡು ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಹೊಟ್ಟೆಯಿಂದ ಕರುಳಿನ ಭಾಗ ಕಿತ್ತು ಬಂದಿತ್ತು. ತಲೆ, ಕೈ , ಕಾಲಿನ ಭಾಗ ಕೂಡ ಛಿದ್ರವಾಗಿತ್ತು

ಇದೀಗ ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಂಜುಳ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Key words: Helium, explosion case, Mysore, Death, two