Saturday, August 15, 2026

BDA Apartments

Home Front Page ನಾಯಕತ್ವ ಬದಲಾವಣೆ: ಗೊಂದಲ ಬಗೆಹರಿಯದಿದ್ರೆ ಕಾರ್ಯಕರ್ತರಿಗೆ ಸಮಸ್ಯೆ – ಸಚಿವ ಸತೀಶ್ ಜಾರಕಿಹೊಳಿ

ನಾಯಕತ್ವ ಬದಲಾವಣೆ: ಗೊಂದಲ ಬಗೆಹರಿಯದಿದ್ರೆ ಕಾರ್ಯಕರ್ತರಿಗೆ ಸಮಸ್ಯೆ – ಸಚಿವ ಸತೀಶ್ ಜಾರಕಿಹೊಳಿ

ಬೆಂಗಳೂರು,ಫೆಬ್ರವರಿ,11,2026 (www.justkannada.in): ನಾಯಕತ್ವ ಬದಲಾವಣೆ ವಿಚಾರದಲ್ಲಿ ಗೊಂದಲ ಆಗೇ ಆಗುತ್ತೆ.  ಗೊಂದಲ ಬಗೆಹರಿಯದಿದ್ದರೇ ಕಾರ್ಯಕರ್ತರಿಗೆ ಸಮಸ್ಯೆ ಆಗುತ್ತದೆ ಎಂದು ಲೋಕೋಪಯೋಗಿ ಇಲಾಖೆ ಸತೀಶ್ ಜಾರಕಿಹೊಳಿ ತಿಳಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ,  ನಾನು ಪದೇ ಪದೇ ಹೇಳಿದರೆ ಪ್ರಯೋಜನ ಇಲ್ಲ. ಈ ವಿಚಾರವಾಗಿ ಹೇಳಬೇಕಾದವರು ಹೇಳಿದ್ರೆ ಪ್ರಯೋಜನವಾಗುತ್ತದೆ.  ಸಿಎಂ ಸಿದ್ದರಾಮಯ್ಯಗೆ ಹೇಳಿ ಡಿಕೆ ಶಿವಕುಮಾರ್ ದೆಹಲಿಗೆ ಹೋಗಿದ್ದಾರೆ ಸಿಎಂ ಅನುಮತಿ ಪಡೆದು ಹೋಗಿದ್ದಾರೆ ಬಂದಾಗ ಭೇಟಿ ಮಾಢುತ್ತಾರೆ ಎಂದರು.

ಸಾಮಾನ್ಯವಾಗಿ ಸಿಎಂ ಬಜೆಟ್ ಮೀಟಿಂಗ್ ಮಾಡುತ್ತಾರೆ. ಡಿಕೆ ಶಿವಕುಮಾರ್ ಸಭೆಗೆ ಗೈರಾಗಿದ್ದಾರೆ ಗೈರಾಗಬಾರದು ಅಂತೇನು ಇಲ್ಲ.  ಸಿಎಂಗೆ ಮಾಹಿತಿ ಕೊಟ್ಟು ದೆಹಲಿಗೆ ಹೋಗಿದ್ದಾರೆ ಅವರೇ ಇದಕ್ಕೆ ಸರಿಯಾದ ಉತ್ತರ ಕೊಡಬೇಕು ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.

Key words: Leadership change, confusion, Minister, Sathish Jarkiholi