ನಾಳೆ ತಮಿಳು, ಮಲೆಯಾಳಂನಲ್ಲಿ ‘ಹೆಬ್ಬುಲಿ’ ರಿಲೀಸ್

ಬೆಂಗಳೂರು, ಜನವರಿ 29, 2019 (www.justkannada.in): ಸೂಪರ್ ಹಿಟ್ ಆಗಿದ್ದ ಕಿಚ್ಚ ಸುದೀಪ್ ಅಭಿನಯದ ‘ಹೆಬ್ಬುಲಿ’ ಸಿನಿಮಾ ಈಗ ಕೇರಳದಲ್ಲಿ ತಮಿಳಿನಲ್ಲಿ ಬಿಡುಗಡೆಯಾಗುತ್ತಿದೆ.

ಹೆಬ್ಬುಲಿ ಸಿನಿಮಾವನ್ನು ತಮಿಳು ಭಾಷೆಗೆ ಡಬ್ ಮಾಡಲಾಗಿದ್ದು, ಇದೇ ಜನವರಿ 31 ರಂದು ಕೇರಳದಲ್ಲಿ ‘ಪೊಯ್ಯಾಟ್ಟಂ’ ಎಂಬ ಟೈಟಲ್ ನಲ್ಲಿ ಬಿಡುಗಡೆಯಾಗುತ್ತಿದೆ.

ಅದೂ ಕನ್ನಡದಲ್ಲಿ ಬಿಡುಗಡೆಯಾಗಿ ಇಷ್ಟು ಸಮಯದ ಬಳಿಕ ಬೇರೆ ಭಾಷೆಗೆ ಡಬ್ ಆಗುತ್ತಿರುವುದು ವಿಶೇಷ. ಕಿಚ್ಚ ಸುದೀಪ್ ಸೈನಿಕನ ಅವತಾರದಲ್ಲಿ ಕಾಣಿಸಿಕೊಂಡಿರುವ ಈ ಸಿನಿಮಾದ ಮಲಯಾಳಂ ಪೋಸ್ಟರ್ ಗಳು ಈಗಾಗಲೇ ಬಿಡುಗಡೆಯಾಗಿದೆ.