ಭಾವಿ ಪತ್ನಿಯೊಂದಿಗೆ ಹಾಸ್ಟೆಲ್ ಮಕ್ಕಳಿಗೆ ಹಾಸಿಗೆ ನೀಡಿ ನೆರವಾದ ನಟ ಚೇತನ್

ಬೆಂಗಳೂರು, ಜನವರಿ 29, 2019 (www.justkannada.in): ನಟ ಚೇತನ್ ಅವರ ಸಾಮಾಜಿಕ ಕೆಲಸಕ್ಕೆ ಅವರ ಭಾವಿ ಪತ್ನಿ ಕೂಡ ಕೈ ಜೋಡಿಸಿದ್ದಾರೆ.

ಅನಾಥಾಶ್ರಮದ ಮಕ್ಕಳಿಗೆ ಚೇತನ್ ಹಾಸಿಗೆ ನೀಡಿದ್ದಾರೆ. ಮಕ್ಕಳಿಗೆ ಸರಿಯಾಗಿ ಮಲಗಲು ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಈ ಕೆಲಸದ ಮೂಲಕ ಈ ಜೋಡಿ ಖುಷಿಪಟ್ಟಿದೆ. ಈ ಬಗ್ಗೆ ಫೇಸ್ ಬುಕ್ ನಲ್ಲಿ ಚೇತನ್ ಬರೆದುಕೊಂಡಿದ್ದಾರೆ.

ನಟ ಚೇತನ್ ಈಗಾಗಲೇ ತಮ್ಮ ಸಾಮಾಜಿಕ ಕೆಲಸಗಳ ಮೂಲಕ ಹಾಗೂ ಹೋರಾಟಗಳ ಮೂಲಕ ಗುರುತಿಸಿಕೊಂಡಿದ್ದಾರೆ. ಇದೀಗ ಹಾಸ್ಟೆಲ್ ಮಕ್ಕಳಿಗೆ ಮೇಘ, ಚೇತನ್ ಇಬ್ಬರೂ ಸೇರಿ ಹಾಸಿಗೆಗಳನ್ನು ನೀಡಿದ್ದಾರೆ.