ಹಿಮಾಚಲ ಪ್ರದೇಶದ ಮತ್ತೆ ಭಾರಿ ಹಿಮಪಾತ: ಮೂವರು ಚಾರಣಿಗರು ಸಾವು

0
1

ಬೆಂಗಳೂರು, ಅಕ್ಟೋಬರ್ 25, 2021 (www.justkannada.in): ಹಿಮಾಚಲ ಪ್ರದೇಶದ ಕಿನ್ನೌರ್ ಜಿಲ್ಲೆಯಲ್ಲಿ ಮತ್ತೆ ಭಾರಿ ಹಿಮಪಾತ ಸಂಭವಿಸಿದೆ.

ಹಿಮಾಚಲ ಪ್ರದೇಶದ ಕಿನ್ನೌರ್ ಜಿಲ್ಲೆಯಲ್ಲಿ ಭಾರಿ ಹಿಮಪಾತದ ನಂತರ ಮೂವರು ಚಾರಣಿಗರು ಸಾವನ್ನಪ್ಪಿದ್ದಾರೆ.
ಹಿಮಪಾತದಡಿ ಸಿಲುಕಿದ್ದ 10 ಜನರನ್ನ ರಕ್ಷಿಸಲಾಗಿದೆ. ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ ಎಂದು ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸರು ತಿಳಿಸಿದ್ದಾರೆ.

ಹಿಮಾಚಲ ಪ್ರದೇಶದ ಕಿನ್ನೌರ್ ಜಿಲ್ಲೆಯಲ್ಲಿ ಈ ಹಿಂದೆಯೂ ಹಿಮಪಾತವಾಗಿತ್ತು. ಇದೀಗ ಮತ್ತೆ ಭಾರಿ ಹಿಮಪಾತ ಸಂಭವಿಸಿದ್ದು, ಇದರಲ್ಲಿ ಮೂವರು ಚಾರಣಿಗರು ಜೀವ ಕಳೆದುಕೊಂಡಿದ್ದಾರೆ.