ಭಾನುವಾರದ ಬಾಡೂಟಕ್ಕೆ ಖರೀದಿ ಭರಾಟೆ ಜೋರು !

ಮೈಸೂರು, ಮೇ 23, 2021 (www.justkannada.in): ಇಂದು ಬೆಂಗಳೂರು, ಸೇರಿದಂತೆ ಮೈಸೂರಿನ ವಿವಿಧೆಡೆ ಭಾನುವಾರದ ಬಾಡೂಟಕ್ಕಾಗಿ ಜನರು ಮಾತ್ರ ಮಾಂಸದಂಗಡಿಗಳಿಗೆ ಮುಗಿಬಿದ್ದಿದ್ದರು.

ನಗರದ ಬಹುತೇಕ ಮಾಂಸ. ಮೀನು ಮಾರಾಟ ಅಂಗಡಿಗಳ ಮುಂಭಾಗ ದೊಡ್ಡ ಕ್ಯೂ ಕಂಡು ಬಂತು. 10 ಗಂಟೆ ನಂತರ ಅಂಗಡಿಗಳು ಬಂದ್ ಆಗಲಿರುವ ಹಿನ್ನಲೆಯಲ್ಲಿ ಖರೀದಿಗೆ ಜನ ಮುಗಿಬಿದ್ದರು.

ಬೆಂಗಳೂರಿನಲ್ಲಿ ನಿನ್ನೆ ಪೊಲೀಸರು ಕಠಿಣ ಕ್ರಮ ಜಾರಿ ಮಾಡಿದ್ದರಿಂದ  ಜನರು ಇಂದು ನಾ ಮುಂದು ತಾ ಮುಂದು ಎಂಬಂತೆ ಖರೀದಿಯಲ್ಲಿ ನಿರತರಾಗಿದ್ದರು.