ಗಡಿಗಳಲ್ಲಿ ಮತ್ತಷ್ಟು ಬಿಗಿ, ಅಂತರಾಜ್ಯ ಪ್ರಯಾಣಕ್ಕೆ ಕೋವಿಡ್ ನೆಗೆಟಿವ್ ರಿಪೋರ್ಟ್ ಕಡ್ಡಾಯ

ಬೆಂಗಳೂರು, ಮೇ 23, 2021 (www.justkannada.in):

ಅಂತರ ರಾಜ್ಯ ಪ್ರಯಾಣಿಕರಿಗೆ ಕೋವಿಡ್ ಪರೀಕ್ಷಾ ವರದಿ ಅತ್ಯಗತ್ಯ ಎಂದು ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.

ನಾವು ಪ್ರಮುಖ ರಸ್ತೆಗಳಿಗೆ ಮಾತ್ರವಲ್ಲದೆ ಕಳೆದ ಬಾರಿಯಂತೆ ಸಣ್ಣ ರಸ್ತೆಗಳಿಗೂ ಬ್ಯಾರಿಕೇಡ್ ಅಳವಡಿಸಲಾಗಿದೆ. ಎಂದು ಅವರು ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.

ಗಡಿ ಜಿಲ್ಲೆಗಳಾದ ಬೆಳಗಾವಿ, ಬೀದರ್, ಕಲಬುರಗಿ, ಬೆಂಗಳೂರಿನ ಆನೇಕಲ್ (ತಮಿಳುನಾಡಿನ ಗಡಿ) ಮತ್ತು ಮಂಗಳೂರು (ಕೇರಳದ ಗಡಿ) ಬಳಿ ನಿರ್ಬಂಧಗಳನ್ನು ಹೇರಿದ್ದೇವೆ’ ಎಂದು ಸಚಿವರು ತಿಳಿಸಿದ್ದಾರೆ.

ಸೋಂಕು ಹರಡುವುದನ್ನು ನಿಯಂತ್ರಿಸಲು ಜಿಲ್ಲೆಗಳಲ್ಲಿ ಲಾಕ್ ಡೌನ್ ಅನ್ನು ಕಟ್ಟುನಿಟ್ಟಾಗಿ ಹೇರುವಂತೆ ಪೊಲೀಸರು ಸೇರಿದಂತೆ ಜಿಲ್ಲಾ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಲಾಕ್ ಡೌನ್ ಗೆಜನ ಬದ್ಧರಾಗಿರಬೇಕು ಎಂದು ಕೋರಿದ್ದಾರೆ.