ಧಾರಾಕಾರ ಮಳೆ: ವೀರನಹೊಸಹಳ್ಳಿಯಲ್ಲಿ ಮನೆ ಕುಸಿದು ವ್ಯಕ್ತಿ ದುರ್ಮರಣ: ಪರಿಹಾರ ಘೋಷಣೆ..

ಮೈಸೂರು,ಆ,9,2019(www.justkannada.in): ನಿರಂತರವಾಗಿ ಬಿಟ್ಟು ಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆಗೆ ಮನೆಯ ಗೋಡೆ ಕುಸಿದು ವ್ಯಕ್ತಿ ಮೃತಪಟ್ಟಿರುವ ಘಟನೆ ಹುಣಸೂರು ತಾಲ್ಲೂಕಿನ ವೀರನಹೊಸಹಳ್ಳಿಯಲ್ಲಿ ನಡೆದಿದೆ.

ಕಳೆದ ಒಂದು ವಾರಗಳಿಂದಲೂ ಸುರಿಯುತ್ತಿರುವ ಧಾರಕಾರ ಮಳೆಯಿಂದ  ಮನೆ ಗೋಡೆ ಕುಸಿದು ಬಿದ್ದ ಪರಿಣಾಮ 35 ವರ್ಷದ ವ್ಯಕ್ತಿಯೊಬ್ಬ  ಮೃತಪಟ್ಟಿದ್ದಾನೆ. ಈ  ಬಗ್ಗೆ  ಈಗಾಗಲೇ ಸರ್ಕಾರ  ಮೃತ ಕುಟುಂಬಕ್ಕೆ 5ಲಕ್ಷ  ಪರಿಹಾರ ಘೋಷಣೆ ಮಾಡಲಾಗಿದೆ.

ಮಹಾಮಳೆಗೆ ಮಹಿಳೆ ಅಸ್ವಸ್ಥ…

ಹುಣಸೂರು ತಾಲ್ಲೂಕಿನ ಹನಗೂಡು ಹೊಬಳಿ ಅಬ್ಬೂರು ಗ್ರಾಮದಲ್ಲಿ  ಮಹಾಮಳೆಗೆ ಮಹಿಳೆ ಅಸ್ವಸ್ಥವಾಗಿರುವ ಘಟನೆ ನಡೆದಿದೆ.ಮನೆಯಲ್ಲಿದ್ದ ಗ್ರಾಮದ ರೇವಣ್ಣರ ಪತ್ನಿ ಕುಮಾರಿ‌‌ ಅಸ್ವಸ್ಥಗೊಂಡ ಮಹಿಳೆ. ಮಳೆಯಿಂದಾಗಿ ಏಕಾಏಕಿ ಮನೆಗೆ ನೀರು ನುಗ್ಗಿದ್ದರಿಂದ  ಮಹಿಳೆ ಗಾಬರಿಗೊಂಡು ಅಸ್ವಸ್ಥರಾಗಿದ್ದು ಕೂಡಲೇ ಮಹಿಳೆಯನ್ನ  ಆ್ಯಂಬುಲೆನ್ಸ್ ಮೂಲಕ ಅಸ್ವಸ್ಥ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಇನ್ನು ಇಡೀ ಕುಟುಂಬವನ್ನ ಬೇರೆಡೆಗೆ ಸ್ಥಳಾಂತರ ಮಾಡಲಾಗಿದೆ.

Key words: heavy rain-  Man -dies –wall –collapse -hunsur