ವಿಪರೀತ ಮಳೆ, ಗುಡ್ಡ ಕುಸಿತ: ಸಂಕಷ್ಟಕ್ಕೆ ಸಿಲುಕಿದ ಕೇದಾರನಾಥ ದರ್ಶನಕ್ಕೆ ತೆರಳಿದ್ದ 40 ಮಂದಿ ಕನ್ನಡಿಗರು.

ಚಿತ್ರದುರ್ಗ, ಆಗಸ್ಟ್,15,2023(www.justkannada.in):  ಉತ್ತರ ಭಾರತದ ಹಲವೆಡೆ ಸಾಲು, ಸಾಲು ಭೂಕುಸಿತಗಳು ಸಂಭವಿಸುತ್ತಿದ್ದು, ಈ ನಡುವೆ ವಿಪರೀತ ಮಳೆ, ಗುಡ್ಡ ಕುಸಿತ ಹಿನ್ನೆಲೆ, ಕೇದಾರನಾಥ ದರ್ಶನಕ್ಕೆ ತೆರಳಿದ್ದ 40 ಕನ್ನಡಿಗರು ಸಿಲುಕಿದ್ದು ರಕ್ಷಣಾತ್ಮಕವಾಗಿ ವಾಪಸ್ ಕರೆಸಿಕೊಳ್ಳಲು ಮನವಿ ಮಾಡಿದ್ದಾರೆ.

ಹಿಮಾಲಯ ಪರ್ವತ ಶ್ರೇಣಿಯ ತಪ್ಪಲಿನಲ್ಲಿರುವ ಕೇದಾರನಾಥನ ದರ್ಶನಕ್ಕಾಗಿ ಉತ್ತರಾಖಂಡ್‌ಗೆ ತೆರಳಿದ್ದ 40 ಕನ್ನಡಿಗರು ಕೇದಾರ ಬಳಿ ಸಿಲುಕಿದ್ದಾರೆ. ಕಳೆದ ಒಂದು ವಾರದ ಹಿಂದೆ ನಲವತ್ತು ಜನರ ತಂಡದ ಜೊತೆಗೆ ಚಿತ್ರದುರ್ಗದ ಮೂವರು ಮಹಿಳೆಯರು ಕೂಡ ಪ್ರವಾಸ ತೆರಳಿದ್ದರು.  ಆದರೆ ಕೇದಾರ ಬಳಿ ವಿಪರೀತ ಮಳೆ ಹಾಗೂ ಗುಡ್ಡ ಕುಸಿತ ಹಿನ್ನೆಲೆ ಕೇದಾರದಿಂದ 30ಕಿ.ಮೀ ದೂರದಲ್ಲಿ ಅನೇಕರು ಸಿಲುಕಿದ್ದಾರೆ. ಚಿತ್ರದುರ್ಗದ 3 ಮಹಿಳೆಯರು, ಶಿವಮೊಗ್ಗ 4, ಭದ್ರವತಿಯಿಂದ 7 ಜನ ಹಾಗೂ ಬೆಂಗಳೂರಿನ 26 ಮಂದಿ ಸಿಲುಕಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಕೇದಾರನಾಥ  ಬಳಿ ಸಿಲುಕಿರುವ 40 ಕನ್ನಡಿಗರು ಶೀಘ್ರ ಸುರಕ್ಷಿತವಾಗಿ ವಾಪಸ್ ಕರೆಸಿಕೊಳ್ಳುವ ವ್ಯವಸ್ಥೆ ಮಾಡಲು ಮನವಿ ಮಾಡಿದ್ದಾರೆ.  ಉತ್ತರ ಭಾರತದ ಹಲವೆಡೆ ಸಾಲು, ಸಾಲು ಭೂಕುಸಿತಗಳು ಸಂಭವಿಸುತ್ತಿವೆ. ಕಳೆದ ಒಂದು ತಿಂಗಳ ಹಿಂದಷ್ಟೇ ಭಾರೀ ಮಳೆಯಾಗಿ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿತ್ತು.

Key words: Heavy rain- 40 Kannadiga-Kedarnath -darshan – trouble.