Saturday, August 22, 2026

BDA Apartments

Home Front Page ಹೆಚ್.ಡಿಕೆ ಕಿಂಗ್ ಆಫ್ ಬ್ಲ್ಯಾಕ್ ಮೇಲ್ ಹಾಗೂ ಪೆನ್ ಡ್ರೈವ್ ಕಥಾನಾಯಕ, ಡೈರೆಕ್ಟರ್- ಡಿಕೆ ಶಿವಕುಮಾರ್...

ಹೆಚ್.ಡಿಕೆ ಕಿಂಗ್ ಆಫ್ ಬ್ಲ್ಯಾಕ್ ಮೇಲ್ ಹಾಗೂ ಪೆನ್ ಡ್ರೈವ್ ಕಥಾನಾಯಕ, ಡೈರೆಕ್ಟರ್- ಡಿಕೆ ಶಿವಕುಮಾರ್ ವಾಗ್ದಾಳಿ.

ಚಿಕ್ಕಮಗಳೂರು,ಮೇ,8,2024 (www.justkannada.in):  ಹೆಚ್ ಡಿ ಕುಮಾರಸ್ವಾಮಿ  ಕಿಂಗ್ ಆಫ್ ಬ್ಲ್ಯಾಕ್ ಮೇಲ್ ಹಾಗೂ ಪೆನ್ ಡ್ರೈವ್ ನ ಕಥಾನಾಯಕ, ಅವರೇ ಡೈರೆಕ್ಟರ್ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ವಾಗ್ದಾಳಿ ನಡೆಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಡಿಸಿಎಂ ಡಿ.ಕೆ ಶಿವಕುಮಾರ್, ಪೆನ್ ಡ್ರೈವ್ ಪ್ರಕರಣದ ತನಿಖೆ ನಡೆಯುತ್ತಿದೆ, ನಡೆಯಲಿ ಪೆನ್ ಡ್ರೈವ್ ಕಥಾನಾಯಕ ಹಾಗೂ ಡೈರೆಕ್ಟರ್ ಕುಮಾರಸ್ವಾಮಿ ಕುಮಾರಸ್ವಾಮಿಗೆ ನನ್ನ ರಾಜೀನಾಮೆ ಬೇಕಂತೆ ಕೊಡೋಣಾ. ಇವರು ನನ್ನ ವಿರುದ್ದ ಆರೋಪ ಮಾಡುತ್ತಿದ್ದಾರೆ ಮಾಡಲಿ ನನ್ನ ಹೆಸರು ಹೇಳದಿದ್ದರೇ ಮಾರ್ಕೆಟ್ ಓಡಲ್ಲ ಎಂದು ಲೇವಡಿ ಮಾಡಿದರು.

ಪೆನ್ ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಾದ್ಯಂತ ಜೆಡಿಎಸ್ ಪ್ರತಿಭಟನೆ ಹಿನ್ನೆಲೆ ಈ ಕುರಿತು ಪ್ರತಿಕ್ರಿಯಿಸಿದ ಡಿಸಿಎಂ ಡಿಕೆ ಶಿವಕುಮಾರ್,  ಪ್ರತಿಭಟನೆ ಮಾಡಲಿ ನನ್ನ ಹೆಸರು ಹೇಳದಿದ್ದರೇ ಏನು ನಡೆಯಲ್ಲ. ನನ್ನ ಹೆಸರು ಇಲ್ಲದೇ ಅವರಿಗೆ ನಿದ್ದೆಯೂ ಬರಲ್ಲ ಬಿಜೆಪಿಯವರ ಕಡೆಯಿಂದ ಏನು ಮಾಡಬೇಕು ಅದನ್ನ ಮಾಡಿಸಿದ್ದಾರೆ. ಹೆಚ್ ಡಿ ಕುಮಾರಸ್ವಾಮಿ ಏನೇನು ಮಾಡುತ್ತಿದ್ದಾರೆ ಗೊತ್ತು. ಹೆಚ್ ಡಿಕೆ ಎಲ್ಲಾ ಅಧಿಕಾರಿಗಳಿಗೂ ಹೆದರಿಸುತ್ತಿದ್ದಾರೆ.  ಹೆಚ್ ಡಿಕೆ ಏನ್ ಲಾಯರಾ..? ಜಡ್ಜಾ..?  ತೀರ್ಪು ಕೊಡೋಕೆ ಹೋಗಿ  ಕೋರ್ಟ್ ಅಲ್ಲಿ ವಾದ ಮಾಡಲಿ ಎಂದು ಟಾಂಗ್ ಕೊಟ್ಟರು.

Key words: HDK -King – Black Mail – DK Shivakumar