Wednesday, September 23, 2026

BDA Apartments

Home Front Page ಬಿಡದಿ ಟೌನ್ ಶಿಪ್: ಜೂ.27 ರಂದು ಬಹಿರಂಗ ಚರ್ಚೆಗೆ ಬರುವಂತೆ ಸಿಎಂ ಡಿಕೆಶಿಗೆ ಮತ್ತೆ ಪತ್ರ...

ಬಿಡದಿ ಟೌನ್ ಶಿಪ್: ಜೂ.27 ರಂದು ಬಹಿರಂಗ ಚರ್ಚೆಗೆ ಬರುವಂತೆ ಸಿಎಂ ಡಿಕೆಶಿಗೆ ಮತ್ತೆ ಪತ್ರ ಬರೆದ HDK

ಬೆಂಗಳೂರು,ಜೂನ್,25,2026 (www.justkannada.in):  ಬಿಡದಿ ಟೌನ್ ಶಿಪ್ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಮತ್ತು ಸಿಎಂ ಡಿಕೆ ಶಿವಕುಮಾರ್ ನಡುವಿನ ವಾಗ್ಯುದ್ಧ, ಜಟಾಪಟಿ ಮುಂದುವರೆದಿದೆ.

ಇದೀಗ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಮತ್ತೆ ಸಿಎಂ ಡಿಕೆ ಶಿವಕುಮಾರ್ ಅವರಿಗೆ ಪತ್ರ ಬರೆದು ಜೂನ್ 27 ರಂದು ಬಹಿರಂಗ ಚರ್ಚೆಗೆ ಬರುವಂತೆ ಪ್ರವಾಸ ಪತ್ರ ಲಗತ್ತಿಸಿ ಪಂಥಾಹ್ವಾನ ನೀಡಿದ್ದಾರೆ.

ಈ ಕುರಿತು ಪತ್ರ ಬರೆದಿರುವ ಹೆಚ್ ಡಿಕೆ, ಜೂನ್ 27 ರಂದು ಜಿಬಿಎ ಅಧಿಕಾರಿಗಳೊಂದಿಗೆ ಬಹಿರಂಗ ಚರ್ಚೆಗೆ ಬೈರಮಂಗಲಕ್ಕೆ ಬನ್ನಿ. ಜನರ ನಡುವೆ ಸಮಸ್ಯೆ ಆಲಿಸಿ ಪರಿಹಾರ ಹುಡುಕೋಣ ಎಂದು ಉಲ್ಲೇಖಿಸಿದ್ದಾರೆ.

ಬಿಡದಿ ಟೌನ್ ಶಿಪ್ ನಿರ್ಮಾಣ ವಿಚಾರಕ್ಕೆ ಪದೇ ಪದೇ ಇಬ್ಬರು ನಾಯಕರ ನಡುವೆ ವಾಗ್ವಾದ ನಡೆಯುತ್ತಲೇ ಇದೆ.ಬಿಡದಿ ಟೌನ್ ಶಿಪ್ jk02_new jk02 new

Key words: Bidadi Township, HDK, another letter, CM, DK Shivakumar