Thursday, August 6, 2026

BDA Apartments

Home Front Page ಹೆಚ್ ಡಿಡಿ ಕುಟುಂಬ ಸ್ವಾರ್ಥಕ್ಕೆ ಕಣ್ಣೀರು ಹಾಕ್ತಿದ್ದಾರೆ: ಸಚಿವ ದಿನೇಶ್ ಗುಂಡೂರಾವ್ ಟಾಂಗ್

ಹೆಚ್ ಡಿಡಿ ಕುಟುಂಬ ಸ್ವಾರ್ಥಕ್ಕೆ ಕಣ್ಣೀರು ಹಾಕ್ತಿದ್ದಾರೆ: ಸಚಿವ ದಿನೇಶ್ ಗುಂಡೂರಾವ್ ಟಾಂಗ್

ರಾಮನಗರ,ನವೆಂಬರ್,8,2024 (www.justkannada.in): ಹೆಚ್ ಡಿ ದೇವೇಗೌಡರ ಕುಟುಂಬ ಸ್ವಾರ್ಥಕ್ಕೆ ಕಣ್ಣೀರು ಹಾಕುತ್ತಿದ್ದಾರೆ. ಎಲೆಕ್ಷನ್ ನಲ್ಲಿ ಅನುಕಂಪದ ರಾಜಕೀಯ ನಡೆಯಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಟಾಂಗ್ ಕೊಟ್ಟರು.

ಇಂದು ರಾಮನಗರದಲ್ಲಿ ಮಾತನಾಡಿದ ದಿನೇಶ್ ಗುಂಡೂರಾವ್, ಕಾಂಗ್ರೆಸ್ ನಿಂದಲೇ ಹೆಚ್ ಡಿಕೆ ಸಿಎಂ ಆಗಿದ್ದು. ಉಪಚುನಾವಣೆಯಲ್ಲಿ ಹೆಚ್  ಡಿ ದೇವೇಗೌಡರು ಅಗ್ರೆಸ್ಸಿವ್ ಆಗಿ ಮಾತನಾಡತ್ತಿದ್ದಾರೆ.  ಮುತ್ಸದ್ಧಿ ವ್ಯಕ್ತಿ ಈ ರೀತಿ ಮಾತನಾಡಬಾರದು. ಎನ್ ಡಿಗೆ ನಾಯಕರಿ ಈಗ ಮೇಕೆದಾಟು ವಿಚಾರ ನೆನಪಾಗಿದೆ. ಪ್ರಧಾನಿ ಮೋದಿ ಬಳಿ ನೀವು ಹೋಗುವಾಗ ನಮ್ಮನ್ನು ಕರೆಯಬೇಕಿತ್ತು ಎಂದು ಕಿಡಿಕಾರಿದರು.

ರಾಜ್ಯದಲ್ಲಿ ಉದ್ಯೋಗ ಸೃಷ್ಠಿ ಎಂಬ ಹೆಚ್ ಡಿಕೆ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ದಿನೇಶ್ ಗುಂಡೂರಾವ್, ರಾಜ್ಯದ ಬಹುದೇಕ ಉದ್ಯಮಗಳು ಗುಜರಾತ್ ಗೆ ಹೋಗುತ್ತಿವೆ. ಹಲವು ಉದ್ಯಮಗಳು ನಮ್ಮ ರಾಜ್ಯಕ್ಕೆ ಬರಲು ಸಿದ್ದವಿದ್ದವು.  ಆದರೆ ಕೇಂದ್ರ ಸರ್ಕಾರ ಅಡ್ಡಿ ಬರುತ್ತಿದೆ. ಉದ್ಯಮಗಳು ಗುಜರಾತ್ ಗೆ ಹೋಗುತ್ತಿವೆ ಅದನ್ನ ಹೆಚ್ ಡಿಕೆ ತಡೆಯಲಿ ಎಂದು ವಾಗ್ದಾಳಿ ನಡೆಸಿದರು.

ಚುನಾವಣೆಯಲ್ಲಿ ಗೆಲ್ಲುವುದಕ್ಕೆ ಹೆಚ್ ಡಿಡಿ ಕುಟುಂಬ ಕಣ್ಣೀರು ಹಾಕುತ್ತಾರೆ. ಇವರದ್ದು ಸ್ವಾರ್ಥದ ಕಣ್ಣೀರು ಅನ್ಯಾಯ ಮಾಡಿದ್ದಾರೆಂದು ಹೇಳುತ್ತಾರೆ. ಯಾರು ಅನ್ಯಾಯ ಮಾಡಿದ್ದಾರೆ ಹೇಳಲಿ. ಇವರದ್ದು ಬರಿ ನಾಟಕ ಎಂದು ಟೀಕಿಸಿದರು.

Key words: HDD, family, tears, selfishness, Minister, Dinesh Gundurao