Wednesday, August 12, 2026

BDA Apartments

Home Front Page ಹೆಚ್.ಡಿ ಕುಮಾರಸ್ವಾಮಿ ಮುಂದಿನ ಸಿಎಂ ಆಗೋದು ನಿಶ್ಚಿತ- ಭವಿಷ್ಯ ನುಡಿದ ಸಿಎಂ ಇಬ್ರಾಹಿಂ.

ಹೆಚ್.ಡಿ ಕುಮಾರಸ್ವಾಮಿ ಮುಂದಿನ ಸಿಎಂ ಆಗೋದು ನಿಶ್ಚಿತ- ಭವಿಷ್ಯ ನುಡಿದ ಸಿಎಂ ಇಬ್ರಾಹಿಂ.

ರಾಮನಗರ,ಜುಲೈ,20,2022(www.justkannada.in): ಹೆಚ್.ಡಿ ಕುಮಾರಸ್ವಾಮಿ ಮುಂದಿನ ಸಿಎಂ ಆಗೋದು ನಿಶ್ಚಿತ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಭವಿಷ್ಯ ನುಡಿದರು.

ರಾಮನಗರದಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಿಎಂ ಇಬ್ರಾಹಿಂ, ಈಗಲೇ ಡಿಕ್ಲೇರ್ ಮಾಡುತ್ತಿದ್ದೇನೆ. ಸಾಬ್ರು ಹೇಳಿರೋ ಮಾತು ಯಾವತ್ತೂ ಸುಳ್ಳಾಗಲ್ಲ.  1994ರಲ್ಲಿ ಹೆಚ್.ಡಿ ದೇವೇಗೌಡರು ಗೆಲ್ಲುತ್ತಾರೆ ಎಂದಿದ್ದೆ. ರಾಮನಗರದಲ್ಲಿ ಹೆಚ್.ಡಿ ದೇವೇಗೌಡರು ಗೆದ್ದರು.  ದೇವೆಗೌಡರು ಹೋಗಿರೋ ಸ್ಥಾನಕ್ಕೆ ಹೆಚ್.ಡಿಕೆ ಬರ್ತಾರೆ ಎಂದು ನುಡಿದರು.

ಸಿದ್ಧರಾಮೋತ್ಸವ ಕುರಿತು ಟೀಕಿಸಿದ ಸಿಎಂ ಇಬ್ರಾಹಿಂ, ಅವರು ಉತ್ಸವ ಮಾಡಿಕೊಳ್ಳುತ್ತಿದ್ದಾರೆ.  ನಾವು ಹಾಗೆ ಮಾಡಲ್ಲ. ಕುಮರಾಸ್ವಾಮಿ ಜಲೋತ್ಸವ. ರೈತರಿಗಾಗಿ ಉತ್ಸವ ಮಾಡಿದ್ರು. ಜೆಡಿಎಸ್ ಗೆ  ಬರೀ ರೈತರ ಚಿಂತೆ ಕರುನಾಡ ಜನರ ಚಿಂತೆ. ನೆಗಿಲು ಹೊತ್ತ ರೈತರೇ ನಮ್ಮ ಹೈಕಮಾಂಡ್ ಎಂದರು.

Key words: HD Kumaraswamy -sure – next CM-CM Ibrahim