ಹೆಚ್.ಡಿ.ಕೆ, ಸಾ.ರಾ ಮಹೇಶ್ ಆರೋಪಕ್ಕೆ ಪ್ರತಿಕ್ರಿಯಿಸಲು ನಕಾರ: ಕುತೂಹಲ ಮೂಡಿಸಿದ ಶಾಸಕ‌ ಜಿ.ಟಿ.ದೇವೆಗೌಡರ ನಡೆ…

ಮೈಸೂರು,ಮಾರ್ಚ್,18,2021(www.justkannada.in): ಕಳೆದ ಎರಡು ದಿನಗಳ ಹಿಂದೆ ನಡೆದ ಮೈಮುಲ್ ಚುನಾವಣೆಯಲ್ಲಿ  ಶಾಸಕ ಜಿ.ಟಿ ದೇವೇಗೌಡರ ಬಣ ಗೆದ್ದಿದ್ದು, ಈ ವೇಳೆಯಲ್ಲಿ ಬೀಗಬೇಕಾದ ಶಾಸಕ ಜಿ.ಟಿ ದೇವೇಗೌಡರು ಜಾಣ್ಮೆ ಪ್ರದರ್ಶನ ಮಾಡಿದ್ದಾರೆ.jk

ತಮ್ಮ ವಿರುದ್ದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹಾಗೂ ಶಾಸಕ  ಸಾ.ರಾ ಮಹೇಶ್ ವಾಗ್ದಾಳಿ ನಡೆಸಿ ಆರೋಪಿಸಿರುವ ಬಗ್ಗೆ ಪ್ರತಿಕ್ರಿಯಿಸಲು ಶಾಸಕ ಜಿ.ಟಿ ದೇವೇಗೌಡರು ನಿರಾಕರಿಸಿದ್ದಾರೆ. ಈ ಮೂಲಕ ಶಾಸಕ ಜಿ.ಟಿ ದೇವೇಗೌಡರ ನಡೆ  ಕುತೂಹಲ ಮೂಡಿಸಿದ್ದು ಜಾಣ್ಮೆಯನ್ನ ಪ್ರದರ್ಶಿಸಿದ್ದಾರೆ.HD kumaraswamy-sara Mahesh –allegation-MLA- GT Deve Gowda

ಸಹಕಾರಿ ಕ್ಷೇತ್ರದಲ್ಲಿ ಹಸ್ತಕ್ಷೇಪದ ಬಗ್ಗೆ ಮಾತನಾಡಿದ ಶಾಸಕ ಜಿ.ಟಿ ದೇವೇಗೌಡರು, ಸಹಕಾರಿ ಕ್ಷೇತ್ರ ಪಕ್ಷಾತೀತವಾದ ಜಾತ್ಯಾತೀತ ಕ್ಷೇತ್ರ. ಸರ್ಕಾರ, ಯಾರು ಹಸ್ತ ಕ್ಷೇಪ ಮಾಡಬಾರದು. ಸಹಕಾರಿ ಕ್ಷೇತ್ರ ಸರ್ಕಾರದ ಸಂಸ್ಥೆಗಳಲ್ಲ. ಜನರ ಷೇರು ಹಣದಿಂದ ಕಟ್ಟಿರುವ ಸಹಕಾರಿ ಸಂಸ್ಥೆಗಳು. ಸಹಕಾರಿ ವಲಯ ಆರ್ಥಿಕ ಕ್ಷೇತ್ರದ ಹೆಬ್ಬಾಗಿಲು ಎಂದು ಮೊದಲ‌ ಪ್ರಧಾನಿ ನೆಹರು ಹೇಳಿದ್ದರು. ಅದರಂತೆ ಕೇಂದ್ರ ಸರ್ಕಾರ ವಾಣಿಜ್ಯ ಬ್ಯಾಂಕ್‌ ಗಳಿಗೆ ಹಾಕುವಂತೆ ಸಹಕಾರಿ ಬ್ಯಾಂಕ್‌ ಗಳಿಗೆ ತೆರಿಗೆ ಹಾಕುವುದನ್ನ ನಿಲ್ಲಿಸಬೇಕು. ಸಹಕಾರಿ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡಿ ಪ್ರೋತ್ಸಾಹಿಸಬೇಕು. ರಾಜ್ಯದಲ್ಲಿ ಸಚಿವ ಎಸ್.ಟಿ.ಸೋಮಶೇಖರ್ ನೇತೃತ್ವದಲ್ಲಿ ಸಹಕಾರಿ ಕ್ಷೇತ್ರ ಚೆನ್ನಾಗಿ ಸಾಗುತ್ತಿದೆ ಎಂದು ನುಡಿದರು.

Key words: HD kumaraswamy-sara Mahesh –allegation-MLA- GT Deve Gowda