ನವದೆಹಲಿ,ಮೇ,6,2025 (www.justkannada.in): ಉಗ್ರರನ್ನ ಮಟ್ಟ ಹಾಕುವ ನಿಟ್ಟಿನಲ್ಲಿ ನಮ್ಮ ಪಕ್ಷ ಹಾಗೂ ಇಡೀ ದೇಶ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆಗಿದೆ ಎಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ತಿಳಿಸಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಹೆಚ್.ಡಿ ದೇವೇಗೌಡರು, ಸೈನಿಕರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ. ಯುದ್ದ ಮಾಡಬೇಕೋ ಬೇಡವೋ ಸೇನೆ ನಿರ್ಧಾರ ಮಾಡುತ್ತೆ ಮೂರು ಸೇನೆಗಳ ಮುಖ್ಯಸ್ಥರಿಗೆ ಸಂಪೂರ್ಣ ಸ್ವಾತಂತ್ರ ನೀಡಲಾಡಿದೆ ಎಂದರು.
1971ರ ಸಮಯವನ್ನು ಈಗ ಹೋಲಿಕೆ ಮಾಡಲು ಆಗಲ್ಲ . ಇಡೀ ದೇಶ ಮೋದಿ ಜೊತೆಗಿದೆ ಪಾಕ್ ಪೋಷಕ ಉಗ್ರರಿಗೆ ತಕ್ಕ ಪಾಠ ಕಲಿಸಲಿದೆ. ಹೀಗಾಗಿ ಪ್ರಧಾನಿ ಮೋದಿ ನಿರ್ಧಾರಕ್ಕೆ ಬೆಂಬಲಿಸುತ್ತೇವೆ ಎಂದು ಹೆಚ್ ಡಿ ದೇವೇಗೌಡರು ತಿಳಿಸಿದರು.
Key words: Our party, country, with PM Modi, HD Deve Gowda