ಹಾಸನದಲ್ಲಿ ಒಂದು ಲಕ್ಷ ಮತ ಪಡೆಯೋದು ಖಚಿತ: ಜೆಡಿಎಸ್ ಅಭ್ಯರ್ಥಿ 2ನೇ ಸ್ಥಾನಕ್ಕೆ ಫೈಟ್ ಮಾಡಲಿ- ಬಿಜೆಪಿ ಅಭ್ಯರ್ಥಿ ಪ್ರೀತಂಗೌಡ.

ಹಾಸನ,ಏಪ್ರಿಲ್,15,2023(www.justkannada.in): ಹಾಸನದಲ್ಲಿ  ನಾನು ಒಂದು ಲಕ್ಷ ಮತ ಪಡೆಯೋದು ಖಚಿತ. ಜೆಡಿಎಸ್ ಅಭ್ಯರ್ಥಿ ಸ್ವರೂಪ್  2ನೇ ಸ್ಥಾನಕ್ಕೆ ಫೈಟ್ ಮಾಡಲಿ ಎಂದು ಹಾಸನದ ಬಿಜೆಪಿ ಅಭ್ಯರ್ಥಿ ಪ್ರೀತಂಗೌಡ ಹೇಳಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಪ್ರೀತಂಗೌಡ, ನಿನ್ನೆ ಹಾಸನ ಜನರು ನನ್ನ ಎದುರಾಳಿಗಳಿಗೆ ಸಂದೇಶ ಕೊಟ್ಟಿದ್ದಾರೆ. ಜೆಡಿಎಸ್ ನನ್ನ ನೈಜ ಎದುರಾಳಿ  ಎಂದರು. ಹಾಸನದಲ್ಲಿ ನಾನು ಒಂದು ಲಕ್ಷ ಮತ ಪಡೆಯುತ್ತೇನೆ.  ಉಳಿದ ಮೂರು ಪಕ್ಷಗಳು 2ನೇ ಸ್ಥಾನಕ್ಕೆ ಹೋರಾಟ ಮಾಡುತ್ತವೆ ಎಂದು ಹೇಳಿದರು.

ಹಾಸನ ಲೂಟಿಯಾಗಿದೆ ಎಂಬ  ಹೆಚ್.ಡಿ ರೇವಣ್ಣ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಪ್ರೀತಂ ಗೌಡ, ಹೌದು ನಾನು ಕ್ಷೇತ್ರದ ಜನರ ಪ್ರೀತಿ ಲೂಟಿ ಮಾಡಿದ್ದೇನೆ.   ಜನರ ಪ್ರೀತಿ ಲೂಟಿ ಮಾಡಿದ್ದಕ್ಕೆ ಅಷ್ಟೊಂದು ಜನರು ಸೇರಿದ್ದು  ಸ್ವರೂಫ್ ಟಿಕೆಟ್ ಪಡೆಯಲು ಎಷ್ಟೊಂದು ಕಷ್ಟಪಟ್ಟರು. ಒಂದು ಪತ್ರ ಕೊಡುವುದಕ್ಕೂ ಹೊಳೇನರಸೀಪುರದ ಅನುಮತಿ ಬೇಕು   ಹಾಗಾಗಿ ಹಾಸನದ ಜನತೆ ಕೆಲಸಗಾರನಿಗೆ ಅವಕಾಶ ಕೊಡುತ್ತಾರೆ ಎಂದರು.

Key words: Hassan – one lakh –votes – BJP candidate -Prithamgowda.