ವೈಯುಕ್ತಿಕ ಲಾಭಕ್ಕಾಗಿ ಪಕ್ಷಗಳ ಜೊತೆ ಹೊಗೋದು ಮಾಮೂಲಿ -ಮತದಾನ ಬಳಿಕ ಜೆಡಿಎಸ್ ವಿರುದ್ಧ  ಮಾಜಿ ಸಚಿವ ಎ. ಮಂಜು ವಾಗ್ದಾಳಿ…

ಹಾಸನ,ಡಿಸೆಂಬರ್,22,2020(www.justkannada.in): ಬಿಜೆಪಿ- ಜೆಡಿಎಸ್ ಮೈತ್ರಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಮಾಜಿ ಸಚಿವ ಎ. ಮಂಜು,  ಜೆಡಿಎಸ್ ಉಳಿವಿಗಾಗಿ ಯಾರ ಜೊತೆಯಲ್ಲಿ ಬೇಕಾದರೂ ಹೋಗುತ್ತಾರೆ. ಬಿಜೆಪಿ ಜೊತೆ ಜೆಡಿಎಸ್ ಸೇರುವ ಪ್ರಶ್ನೇನೇ ಬರೋಲ್ಲ ಎಂದು ಹೇಳಿದರು.Teachers,solve,problems,Government,bound,Minister,R.Ashok

ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆ ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನ ಹನ್ಯಾಳು ಗ್ರಾಮದಲ್ಲಿ ಮಾಜಿ ಸಚಿವ ಎ.ಮಂಜು ಪತ್ನಿಯೊಂದಿಗೆ ಆಗಮಿಸಿ ಮತ ಚಲಾವಣೆ ಮಾಡಿದರು. ಮತದಾನ ಮಾಡಿದ ನಂತರ ಜೆಡಿಎಸ್ ವಿರುದ್ದ ವಾಗ್ದಾಳಿ ನಡೆಸಿದ ಮಾಜಿ ಸಚಿವ ಎ. ಮಂಜು, ಜೆಡಿಎಸ್ ಉಳಿವಿಗಾಗಿ ಯಾರ ಜೊತೆಯಲ್ಲಿ ಬೇಕಾದರೂ ಹೋಗುತ್ತಾರೆ. ಬಿಜೆಪಿ ಜೊತೆ ಜೆಡಿಎಸ್ ಸೇರುವ ಪ್ರಶ್ನೇನೆ ಬರೋಲ್ಲ. ಜೆಡಿಎಸ್ ನ ನಿಲುವನ್ನು ಜನರೇ ತೀರ್ಮಾನ ಮಾಡುತ್ತಾರೆ ಎಂದು ಕಿಡಿಕಾರಿದರು.hassan-former-minister-a-manju-voting

ವೈಯುಕ್ತಿಕ ಲಾಭಕ್ಕಾಗಿ ಪಕ್ಷಗಳ ಜೊತೆ ಹೊಗೋದು ಮಾಮೂಲಿ. ಇದರಿಂದ ಬಿಜೆಪಿಗೆ ಅನುಕೂಲ ಇಲ್ಲ. ನಾವು ಈ ಹಿಂದೆ ಕೂಡ ಪಕ್ಷಗಳ ಜೊತೆ ಹೊಂದಾಣಿಕೆ ನೋಡಿದ್ದವು ಎಂದು ಜೆಡಿಎಸ್ ನಾಯಕರಿಗೆ ಎ. ಮಂಜು ಟಾಂಗ್ ನೀಡಿದರು.

Key words: Hassan-  former minister –A. Manju- voting