Friday, October 16, 2026

Dasara Wishes

Happy Dasara
Home Front Page ಎಲ್ಲಿಯ ಹರಿಯಾಣ, ಎಲ್ಲಿಯ ಕೋಳಿವಾಡ? ಮುಡಾ ಕೇಸ್ ನಮ್ಮ ರಾಜ್ಯಕ್ಕೆ ಸೀಮಿತ- ಸಚಿವ ಸತೀಶ್ ಜಾರಕಿಹೊಳಿ

ಎಲ್ಲಿಯ ಹರಿಯಾಣ, ಎಲ್ಲಿಯ ಕೋಳಿವಾಡ? ಮುಡಾ ಕೇಸ್ ನಮ್ಮ ರಾಜ್ಯಕ್ಕೆ ಸೀಮಿತ- ಸಚಿವ ಸತೀಶ್ ಜಾರಕಿಹೊಳಿ

ಚಿಕ್ಕಮಗಳೂರು, ಅಕ್ಟೋಬರ್,9,2024 (www.justkannada.in):  ಹರಿಯಾಣ ಚುನಾವಣೆಯಲ್ಲಿ ಮುಡಾ ಪ್ರಕರಣ ಪ್ರಭಾವ ಬೀರಿದೆ ಎಂದು ಹೇಳಿಕೆ ನೀಡಿದ್ದ ಮಾಜಿ ಸ್ಪೀಕರ್ ಕೆಬಿ ಕೋಳಿವಾಡ ಅವರಿಗೆ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಟಾಂಗ್ ಕೊಟ್ಟಿದ್ದಾರೆ.

ಈ ಕುರಿತು ಮಾತನಾಡಿರುವ ಸಚಿವ ಸತೀಶ್ ಜಾರಕಿಹೊಳಿ, ಮುಡಾ ಹಗರಣ ಹರಿಯಾಣದಲ್ಲಿ ಹೇಗೆ ಪರಿಣಾಮ ಬೀರುತ್ತೆ.  ಎಲ್ಲಿಯ ಕೋಳಿವಾಡ ಎಲ್ಲಿಯ ಹರಿಯಾ.  ಮುಡಾ ಪ್ರಕರಣ ನಮ್ಮ ರಾಜ್ಯಕ್ಕೆ ಸೀಮಿತವಾಗಿರುವ ವಿಚಾರ ಎಂದು ಹೇಳಿದರು.

ಸಿಎಂ ಬದಲಾವಣೆ  ಚರ್ಚೆ ಕುರಿತು ಪ್ರತಿಕ್ರಿಯಿಸಿದ ಸಚಿವ ಸತೀಶ್ ಜಾರಕಿಹೊಳೀ,   ಸಿಎಂ ಬದಲಾವಣೆ ಆಗುತ್ತೆ ಅಂತಾ ಹೇಳಿದ್ದು ಯಾರು?  ಸರ್ಕಾರ ಬಂದ ಕ್ಷಣದಿಂದಲೂ ಸರ್ಕಾರ ಬೀಳುತ್ತೆ ಅಂತ ಚರ್ಚಿಸುತ್ತಿದ್ದಾರೆ. ಆದರೆ ನಮ್ಮ ಸರ್ಕಾರ  5 ವರ್ಷ ಭದ್ರವಾಗಿರುತ್ತದೆ ಎಂದರು ತಿಳಿಸಿದರು.

ಮೈಸೂರಿನಲ್ಲಿ ಕಾಂಗ್ರೆಸ್ ನಾಯಕರ ಡಿನ್ನರ್ ಕುರಿತು ಪ್ರತಿಕ್ರಿಯಿಸಿದ ಸಚಿವ ಸತೀಶ್ ಜಾರಕಿಹೊಳಿ, ನಾನು ದಸರಾ ಉತ್ಸವದಲ್ಲಿ ಭಾಗಿಯಾಗಲು ಹೋಗಿದ್ದೆ. ಡಾ.ಜಿ. ಪರಮೇಶ್ವರ್, ಹೆಚ್ ಸಿ ಮಹದೇವಪ್ಪ ಭೇಟಿಯಲ್ಲಿ ಯಾವುದೇ ವಿಶೇಷತೆ ಇಲ್ಲ ಎಂದರು.

Key words: Haryana, KB Koliwada, Muda case, Minister, Satish Jarakiholi