ಭ್ರಷ್ಟರನ್ನ ಗಲ್ಲಿಗೇರಿಸಿ, ಸಾಲಾಗಿ ನಿಲ್ಲಿಸಿ ಗುಂಡು ಹಾರಿಸಿ- ಪ್ರಮೋದ್ ಮುತಾಲಿಕ್ ಆಕ್ರೋಶ.

ವಿಜಯಪುರ,ನವೆಂಬರ್,25,2021(www.justkannada.in):  ಭ್ರಷ್ಟ ಅಧಿಕಾರಿಗಳನ್ನ ಗಲ್ಲಿಗೇರಿಸಿ, ಭ್ರಷ್ಟರನ್ನ ಸಾಲಾಗಿ ನಿಲ್ಲಿಸಿ ಗುಂಡು ಹಾರಿಸಿ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿ 15 ಅಧಿಕಾರಿಗಳ ಮನೆ ಕಚೇರಿ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಅಪಾರ ಪ್ರಮಾಣಧ ಸಂಪತ್ತನ್ನ ಪತ್ತೆ ಹಚ್ಚಿದ್ದಾರೆ. ಈ ದಾಳಿ ಕುರಿತು ವಿಜಯಪುರದಲ್ಲಿ ಮಾತನಾಡಿದ ಪ್ರಮೋದ್ ಮುತಾಲಿಕ್, ಭ್ರಷ್ಟ ಅಧಿಕಾರಿಗಳನ್ನು ಗಲ್ಲಿಗೆ ಏರಿಸಬೇಕು. ಸಾಲಾಗಿ ನಿಲ್ಲಿಸಿ ಗುಂಡು ಹಾರಿಸಬೇಕು. ಇಂತಹ ಅಧಿಕಾರಿಗಳ ಹಿಂದೆ ರಾಜಕಾರಣಿಗಳಿದ್ದಾರೆ. ಅವರನ್ನೂ ಹೊರಗೆ ಹಾಕಬೇಕು. ಕಳ್ಳರು ಬಂದೂಕು, ಚಾಕು ಚೂರಿ ಹಿಡಿದುಕೊಂಡು ಲೂಟಿ ಮಾಡುತ್ತಾರೆ. ರಾಜಕೀಯದಲ್ಲಿ ಇದ್ದವರು ಅಧಿಕಾರಿಗಳನ್ನು ಬಳಸಿಕೊಂಡು ಲೂಟಿ ಮಾಡುತ್ತಾರೆ. ಎಲ್ಲ ಪಕ್ಷದ ಬಹುತೇಕ ರಾಜಕಾರಣಿಗಳು ಭ್ರಷ್ಟರು, ಗೂಂಡಾಗಳಾಗಿದ್ದಾರೆ ಎಂದು ಕಿಡಿಕಾರಿದರು.

ಚುನಾವಣೆ ಬಂದಾಗ ರಾಜಕೀಯಕ್ಕೆ ಹಿಂದೂಗಳನ್ನು ಬಳಸಿಕೊಳ್ತಾರೆ. ಹಿಂದುತ್ವಕ್ಕೆ ಹೋರಾಡಿದವರ ಮೇಲೆ ರೌಡಿಶೀಟರ್ ಕೇಸ್ ಹಾಕಲಾಗುತ್ತೆ. ಅದನ್ನು ತಡೆಗಟ್ಟುವುದನ್ನು ಬಿಟ್ಟು, ತಮ್ಮ ಸ್ವಾರ್ಥಕ್ಕಾಗಿ ಹಿಂದುಗಳನ್ನು ಬಳಸಿಕೊಳ್ಳುತ್ತಾರೆ. ಹೀಗಾಗಿ ರಾಜಕಾರಣಿಗಳು ನಿಜವಾದ ಗೂಂಡಾಗಳು ಭ್ರಷ್ಟಾಚಾರಿಗಳೆಂದು ಪ್ರಮೋದ್ ಮುತಾಲಿಕ್ ವಾಗ್ದಾಳಿ  ನಡೆಸಿದರು.

Key words: Hang – corrupt-  shoot-shrirama sene- Pramod Muthalik -Outrage.

ENGLIH SUMMARY…

Make all the corrupt officials to stand in a row and shoot them: Pramod Mutalik
Vijayapura, November 25, 2021 (www.justkannada.in): Chief of Sriramasene Pramod Mutalik has expressed his ire upon the widespread corruption in government departments in the State. “All the corrupt officials should be made to stand in a line, and they should be shot,” he said.
The ACB officials conducted a raid on the residences of 15 government officials yesterday and recovered a huge amount of black money, assets, and other valuables in the raid. Speaking about this in Vijayapura today, Pramod Mutalik expressed his view that all such corrupt officials should be hanged or made to stand in a line and shoot them. “There are politicians behind these corrupt officers. They should be thrown out from the party. While thieves loot the people using weapons, the politicians loot people’s money through corrupt officials. Irrespective of party, majority of the politicians are corrupt and have become goondas,” he said.
Keywords: Sriramasene/ Pramod Mutalik/ Corruption/ corrupt officials/ shoot