Friday, August 21, 2026

BDA Apartments

Home Front Page ಕಾಂಗ್ರೆಸ್ ಗೆದ್ರೆ ಜನಬಲ, ನಾವು ಗೆದ್ರೆ ಹಣಬಲವಾ..? ‘ಕೈ’ ನಾಯಕರ ಟೀಕೆಗೆ  ಸಿಎಂ ಬಸವರಾಜ ಬೊಮ್ಮಾಯಿ...

ಕಾಂಗ್ರೆಸ್ ಗೆದ್ರೆ ಜನಬಲ, ನಾವು ಗೆದ್ರೆ ಹಣಬಲವಾ..? ‘ಕೈ’ ನಾಯಕರ ಟೀಕೆಗೆ  ಸಿಎಂ ಬಸವರಾಜ ಬೊಮ್ಮಾಯಿ ಕಿಡಿ.

ಹಾವೇರಿ,ಅಕ್ಟೋಬರ್,22,2021(www.justkannada.in):  ಹಾನಗಲ್ ಮತ್ತು ಸಿಂದಗಿ ಉಪಚುನಾವಣೆಯಲ್ಲಿ ಗೆಲ್ಲಲು ಬಿಜೆಪಿ ಹಣದ ಹೊಳೆಯನ್ನೇ ಹರಿಸುತ್ತಿದೆ ಎಂಬ ಕಾಂಗ್ರೆಸ್ ನಾಯಕರ ಆರೋಪಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.

ಈ ಕುರಿತು ಇಂದು ಹಾನಗಲ್ ತಾಲ್ಲೂಕಿನ ಬಮ್ಮನಹಳ್ಳಿಯಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಕಾಂಗ್ರೆಸ್ ಗೆದ್ರೆ ಜನಬಲ, ನಾವು ಗೆದ್ರೆ ಹಣ ಬಲವಾ..? ನಮಗೆ ಜನ ಬೆಂಬಲ ಇಲ್ವಾ..?  ವಿರೋಧ ಪಕ್ಷಗಳಿಗೆ ನಾವು ಉತ್ತರ ಕೊಡಲ್ಲ. ಕ್ಷೇತ್ರದ ಜನರೇ ಉತ್ತರ ನೀಡುತ್ತಾರೆ ಎಂದು ಟಾಂಗ್ ನೀಡಿದರು.

ಹಾಗೆಯೇ ಹಾನಗಲ್ ನಲ್ಲಿ ಬಿಜೆಪಿ ಅಭ್ಯರ್ಥಿಯ ಗೆಲುವು ನಿಶ್ಚಿತ. ಬಿಜೆಪಿ ಅಭ್ಯರ್ಥಿ  25 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸುತ್ತಾರೆ ಎಂದು ಸಿಎಂ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.

Key words: hanagal-by-election-cm-basavaraja bommai-outrage-congress