Wednesday, August 5, 2026

BDA Apartments

Home Front Page ದೇವರು ಕೊಟ್ಟ ಶಿಕ್ಷೆ ಎಂದ ಶಾಸಕ ಸಾ.ರಾ ಮಹೇಶ್ ಗೆ ಹೆಚ್.ವಿಶ್ವನಾಥ್ ತಿರುಗೇಟು…

ದೇವರು ಕೊಟ್ಟ ಶಿಕ್ಷೆ ಎಂದ ಶಾಸಕ ಸಾ.ರಾ ಮಹೇಶ್ ಗೆ ಹೆಚ್.ವಿಶ್ವನಾಥ್ ತಿರುಗೇಟು…

ಬೆಂಗಳೂರು,ಡಿ,1,2020(www.justkannada.in): ಹೈ ಕೋರ್ಟ್ ತೀರ್ಪಿನ ಕುರಿತು ಮಾತನಾಡಿ ಹೆಚ್.ವಿಶ್ವನಾಥ್ ಗೆ ಇದು ದೇವರು ಕೊಟ್ಟ ಶಿಕ್ಷೆ ಎಂದು ಟಾಂಗ್ ನೀಡಿದ್ದ ಮಾಜಿ ಸಚಿವ ಸಾ.ರಾ.ಮಹೇಶ್ ಗೆ  ಪರಿಷತ್ ಸದಸ್ಯ ಎಚ್.ವಿಶ್ವನಾಥ್ ತಿರುಗೇಟು ನೀಡಿದ್ದಾರೆ.logo-justkannada-mysore

ಈ ಕುರಿತು ಮಾತನಾಡಿದ ಹೆಚ್.ವಿಶ್ವನಾಥ್, ಸಾರಾ ಮಹೇಶ್ ಕೊಚ್ಚೆ ಗುಂಡಿ, ಕಲ್ಲೆಸೆದು ಹೊಲಸು ಮಾಡಿಕೊಳ್ಳಲ್ಲ. ಅವರ ಬಗ್ಗೆ ನಾನು ಮಾತಾಡಲ್ಲ. ಅವರ ಹೇಳಿಕೆಗೆ ಪ್ರತಿಕ್ರಿಯೆ ಕೊಡಲ್ಲ. ಪದೇ ಪದೇ ಕಲ್ಲೆಸೆದು ಶುಭ್ರ ಬಟ್ಟೆ ಕೊಳೆ ಮಾಡಿಕೊಳ್ಳುವುದಿಲ್ಲ. ಯಾರ ಬಗ್ಗೆ ಏನು ಮಾತನಾಡಬೇಕು ಎಂಬ ಅರಿವಿಲ್ಲದೆ, ಬಾಯಿಗೆ ಬಂದಂತೆ ಮಾತನಾಡುವವರಿಗೆ ಪ್ರತಿಕ್ರಿಯೆ ನೀಡಲು ಆಗುವುದಿಲ್ಲ ಎಂದು ಕಿಡಿಕಾರಿದರು.

ಇದೇ ವೇಳೆ ಸರ್ಕಾರದ ವಿರುದ್ಧ ಪರೋಕ್ಷ ಅಸಮಾಧಾನ ವ್ಯಕ್ತಪಡಿಸಿದ ಹೆಚ್.ವಿಶ್ವನಾಥ್,  ನಮ್ಮಿಂದ ಸಹಾಯ ಪಡೆದುಕೊಂಡು ಸರ್ಕಾರ ರಚನೆ ಮಾಡಿ ಈಗ ಎಲ್ಲ ಅನುಭವಿಸುತ್ತಿರುವವರು ನಮ್ಮ ಕಷ್ಟ ಕಾಲದಲ್ಲಿ ಏಕೆ ಸಹಾಯಕ್ಕೆ ಬರಲಿಲ್ಲ‌. ತಮ್ಮ ಹೆಸರನ್ನು ಮಂತ್ರಿಸ್ಥಾನದ ಪಟ್ಟಿಯಿಂದ ಏಕೆ ತೆಗೆಸಿದರು ಎನ್ನುವುದು ಗೊತ್ತಿಲ್ಲ. ಆದರೂ ತಾವು ಅದನೆಲ್ಲಾ ಎದುರಿಸಿ ನಿಲ್ಲುತ್ತೇನೆ  ಎಂದರು.

Key words: H. Viswanath – tong-MLA -sara  Mahesh- God-given- punishment.