Sunday, August 23, 2026

BDA Apartments

Home Front Page ದೇವೇಗೌಡ ಕುಟುಂಬದ ಇಂದಿನ ಪರಿಸ್ಥಿತಿಗೆ ಸಾರಾ ಮಹೇಶ್ ಕಾರಣ: ಎಚ್.ವಿಶ್ವನಾಥ್ ಗುಡುಗು

ದೇವೇಗೌಡ ಕುಟುಂಬದ ಇಂದಿನ ಪರಿಸ್ಥಿತಿಗೆ ಸಾರಾ ಮಹೇಶ್ ಕಾರಣ: ಎಚ್.ವಿಶ್ವನಾಥ್ ಗುಡುಗು

ಮೈಸೂರು, ಸೆಪ್ಟೆಂಬರ್ 15, 2019 (www.justkannada.in): ಅನರ್ಹ ಶಾಸಕ, ಮಾಜಿ ಸಚಿವ ಎಚ್.ವಿಶ್ವನಾಥ್ ಮತ್ತೆ ಮಾಜಿ ಸಚಿವ ಸಾ.ರಾ.ಮಹೇಶ್ ವಿರುದ್ಧ ಕಿಡಿಕಾರಿದ್ದಾರೆ.

ದೇವೇಗೌಡರ ಕುಟುಂಬ ಇಂದು ಕಣ್ಣೀರಿನಲ್ಲಿ ಕೈತೊಳೆಯಲು ಪ್ರಮುಖ ಕಾರಣ ಸಾರಾ ಮಹೇಶ್. ಇನ್ನು ಒಕ್ಕಲಿಗರಿಗೆ ಜೆಡಿಎಸ್ ಮೇಲಿದ್ದ ಗೌರವ ಹಾಳಾಗಿದೆ. ಇದಕ್ಕೆಲ್ಲ ಸಾರಾ ಮಹೇಶ್ ನಡೆಯೇ ಕಾರಣ ಎಂದು ದೂರಿದ್ದಾರೆ.

ಕಾಸು ಕೊಟ್ಟು ರಾಜಕೀಯ ಮಾಡುವ ಜಯಮಾನ ನನ್ನದಲ್ಲ. ಅದೆಲ್ಲ ಸಾರಾ ಮಹೇಶ್ ಮಾಡುವ ಕೆಲಸ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.