Thursday, August 27, 2026

BDA Apartments

Home Front Page ಹೆಚ್.ವಿಶ್ವನಾಥ್ ಆಣೆ ಪ್ರಮಾಣ ಮಾಡದೆ ಓಡಿ ಹೋಗಿದ್ದಾರೆ- ಚಾಮುಂಡಿಬೆಟ್ಟದಲ್ಲಿ ಮಾಜಿ ಸಚಿವ ಸಾ.ರಾ ಮಹೇಶ್ ಹೇಳಿಕೆ…

ಹೆಚ್.ವಿಶ್ವನಾಥ್ ಆಣೆ ಪ್ರಮಾಣ ಮಾಡದೆ ಓಡಿ ಹೋಗಿದ್ದಾರೆ- ಚಾಮುಂಡಿಬೆಟ್ಟದಲ್ಲಿ ಮಾಜಿ ಸಚಿವ ಸಾ.ರಾ ಮಹೇಶ್ ಹೇಳಿಕೆ…

ಮೈಸೂರು,ಅ,17,2019(www.justkannada.in):  ಅನರ್ಹ ಶಾಸಕ ಹೆಚ್.ವಿಶ್ವನಾಥ್ ಮತ್ತು ಮಾಜಿ ಸಚಿವ ಸಾ.ರಾ ಮಹೇಶ್ ನಡುವಿನ ವಾಕ್ಸಮರ ಮುಂದುವರೆದಿದ್ದು ಆಣೆ ಪ್ರಮಾಣಕ್ಕೆ ಪಂಥಾಹ್ವಾನ ನೀಡಿದಂತೆ ಇಂದು ಚಾಮುಂಡಿ ಬೆಟ್ಟದಲ್ಲಿ ಉಭಯ ನಾಯಕರು ಭೇಟಿ ನೀಡಿದ್ದಾರೆ.

ಚಾಮುಂಡಿ ಬೆಟ್ಟದಲ್ಲಿ ಒಳಗಡೆ ಮಾಜಿ ಸಚಿವ ಸಾ.ರಾ ಮಹೇಶ್ ರವರನ್ನ ಪೊಲೀಸರು ಮನವೊಲಿಸುತ್ತಿದ್ದರೇ ಇತ್ತ ಹೆಚ್.ವಿಶ್ವನಾಥ್ ಚಾಮುಂಡಿ ಬೆಟ್ಟದಿಂದ ಹೊರಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇನ್ನು ಇದೇ ವೇಳೆ ಮಾತನಾಡಿರುವ ಮಾಜಿ ಸಚಿವ ಸಾ.ರಾ ಮಹೇಶ್, ಹೆಚ್.ವಿಶ್ವನಾಥ್ ಆಣೆ ಪ್ರಮಾಣ ಮಾಡದೇ ಓಡಿ ಹೋಗಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.

ನನ್ನ ವಿರುದ್ದ ಪದೇ ಪದೇ ವೈಯಕ್ತಿಕ ಟೀಕೆ ಮಾಡುತ್ತಿದ್ದರು. ಅವರು ಹಿರಿಯರು ಅಂತಾ ಸುಮ್ಮನಿದ್ದೆ. ಪದೇ ಪದೇ ಟೀಕೆ ಮಾಡಿ ನೋವುಂಟು ಮಾಡಿದ್ದಾರೆ. ಹೀಗಾಗಿ ಅವರ ಮುಖ ನೋಡಲು ಇಷ್ಟವಿಲ್ಲ. ನನ್ನ ಕೊನೆ ಉಸಿರಿರುವವರೆಗೂ ನಾನು ಅವರನ್ನ ಭೇಟಿಯಾಗಲ್ಲ ಎಂದು ಸಾ.ರಾ ಮಹೇಶ್ ತಿಳಿಸಿದರು.

ಹಾಗೆಯೇ ಸದನದಲ್ಲಿ ನಾನು ನೀಡಿರುವ ಹೇಳಿಕೆಗಳಿಗೆ ಈಗಲೂ ಬದ್ಧನಿದ್ದೇನೆ ಎಂದು ಸಾ.ರಾ ಮಹೇಶ್ ತಿಳಿಸಿದರು.

Key words: h.vishwanath-sa.ra Mahesh- chamundi hills-mysore