ಮೈಸೂರು,ಆಗಸ್ಟ್.30,2025 (www.justkannada.in): ಮೈಸೂರು ದಸರಾ ಉದ್ಘಾಟನೆಗೆ ಸಾಹಿತಿ ಬಾನು ಮುಷ್ತಾಕ್ ಆಯ್ಕೆ ಮಾಡಿರುವುದಕ್ಕೆ ಬಿಜೆಪಿಯ ಕೆಲ ನಾಯಕರು ವಿರೋಧ ವ್ಯಕ್ತಪಡಿಸಿರುವ ಬೆನ್ನಲ್ಲೆ ಇದೀಗ ವಿಧಾನಪರಿಷತ್ ಬಿಜೆಪಿ ಸದಸ್ಯ ಹೆಚ್ ವಿಶ್ವನಾಥ್ ಬಾನು ಮುಷ್ತಾಕ್ ಆಯ್ಕೆ ಪರ ನಿಂತಿದ್ದಾರೆ.
ಈ ಕುರಿತು ಮಾತನಾಡಿರುವ ಎಂಎಲ್ ಸಿ ಎಚ್. ವಿಶ್ವನಾಥ್, ಬಾನು ಮುಷ್ತಾಕ್ ಒಬ್ಬ ಸಾಧಕಿ. ಹೀಗಾಗಿ ದಸರಾ ಉದ್ಘಾಟನೆಗೆ ಆಹ್ವಾನಿಸಿದ್ದಾರೆ. ಇದನ್ನ ಯಾಕೆ ಇದನ್ನ ವಿರೋಧ ಮಡುತ್ತಿದ್ದಾರೆ ಅಂತಾ ಗೊತ್ತಿಲ್ಲ ಎಂದರು.
ಆರ್ ಅಶೋಕ್ ನಾಗರೀಕ ಮನುಷ್ಯರಾಗಿ ಮಾತನಡಲಿ. ದಸರಾ ಉದ್ಘಾಟನೆಗೆ ಸಾಹಿತಿ ಬಾನು ಮುಷ್ತಾಕ್ ಆಯ್ಕೆ ಕುರಿತು ಸಿಎಂ, ಸಚಿವರು ಮಾತನಾಡಲಿ. ಚಾಮುಂಡಿ ಬೆಟ್ಟದಲ್ಲಿ ಮಂಗಳಾರತಿ ಕೊಡುತ್ತಾರೆ ಅದನ್ನ ಎಲ್ಲರೂ ತೆಗೆದುಕೊಳ್ಳುತ್ತಾರೆ ಎಂದರು ಹೆಚ್ ವಿಶ್ವನಾಥ್ ತಿಳಿಸಿದರು.
ಮೈಸೂರು ದಸರಾ ಉದ್ಘಾಟನೆಗೆ ಸಾಹಿತಿ ಬಾನು ಮುಷ್ತಾಕ್ ಆಯ್ಕೆಗೆ ವಿಪಕ್ಷ ನಾಯಕ ಆರ್.ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಮಾಜಿ ಸಂಸದ ಪ್ರತಾಪ್ ಸಿಂಹ ಸೇರಿ ಹಲವರು ವಿರೋಧ ವ್ಯಕ್ತಪಡಿಸಿದ್ದರು.
Key words: H. Vishwanath, supports , selection , Banu Mushtaq, Dasara, inauguration