Friday, October 16, 2026

Dasara Wishes

Happy Dasara
Home Front Page ಜಾಮೀನು ಕೋರಿ ಮತ್ತೆ ಹೆಚ್.ಡಿ ರೇವಣ್ಣ ಅರ್ಜಿ: ವಿಚಾರಣೆ ಮುಂದೂಡಿಕೆ.

ಜಾಮೀನು ಕೋರಿ ಮತ್ತೆ ಹೆಚ್.ಡಿ ರೇವಣ್ಣ ಅರ್ಜಿ: ವಿಚಾರಣೆ ಮುಂದೂಡಿಕೆ.

ಬೆಂಗಳೂರು ,ಮೇ,6,2024 (www.justkannada.in): ಸಂತ್ರಸ್ತ ಮಹಿಳೆ ಅಪಹರಣ ಪ್ರಕರಣದಲ್ಲಿ ಎಸ್ಐಟಿಯಿಂದ ಬಂಧಿತರಾಗಿರುವ ಶಾಸಕ ಎಚ್.ಡಿ ರೇವಣ್ಣ ಅವರು ಇದೀಗ ಮತ್ತೆ ಜಾಮೀನು ಕೋರಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು ವಿಚಾರಣೆಯನ್ನ ಕೋರ್ಟ್ ನಾಳೆಗೆ ಮುಂದೂಡಿದೆ.

ಸಂಸದ ಪ್ರಜ್ವಲ್ ರೇವಣ್ಣ ವಿರುದ್ದ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಮಹಿಳೆಯನ್ನ ಕಿಡ್ನಾಪ್ ಮಾಡಿರುವ ಆರೋಪದ ಮೇಲೆ ಮೈಸೂರಿನ ಕೆ ಆರ್ ನಗರ ಠಾಣೆಯಲ್ಲಿ ಹೆಚ್.ಡಿ ರೇವಣ್ಣ ವಿರುದ್ದ ಪ್ರಕರಣ ದಾಖಲಾಗಿದೆ. ಅಪಹರಣಕ್ಕೆ ಒಳಗಾಗಿದ್ದ ಸಂತ್ರಸ್ತ ಮಹಿಳೆಯ ಪುತ್ರ ಇತ್ತೀಚಿಗೆ ನನ್ನ ತಾಯಿ ಕಾಣೆಯಾಗಿದ್ದಾಳೆ ಹುಡುಕಿ ಕೊಡಿ ಎಂದು ದೂರು ಸಲ್ಲಿಸಿದ್ದರು.ಜಾಮೀನು ಕೋರಿ ಮತ್ತೆ ಹೆಚ್.ಡಿ ರೇವಣ್ಣ ಅರ್ಜಿ: ವಿಚಾರಣೆ ಮುಂದೂಡಿಕೆ hd revanna

ಪ್ರಕರಣಕ್ಕೆ ಸಂಬಂಧಿಸಿದಂತೆ  ಹೆಚ್.ಡಿ ರೇವಣ್ಣರನ್ನು ಎಸ್ ಐಟಿ ಬಂಧಿಸಿ ಕಸ್ಟಡಿಗೆ ತೆಗೆದುಕೊಂಡಿದೆ. ಬಂಧನಕ್ಕೂ ಮುನ್ನ ಹೆಚ್ ಡಿ ರೇವಣ್ಣ ನಿರೀಕ್ಷಣಾ ಜಾಮೀನು ಕೋರಿ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಆ ಅರ್ಜಿಯನ್ನ ಕೋರ್ಟ್ ವಜಾಗೊಳಿಸಿತ್ತು. ಇದೀಗ ಮತ್ತೊಂದು ಅರ್ಜಿಯನ್ನ ಸಲ್ಲಿಕೆ ಮಾಡಿದ್ದು ವಿಚಾರಣೆ ನಾಳೆಗೆ ಮುಂದೂಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

Ke words: H.D. Revanna, bail, application, adjourned