ಗ್ಯಾರಂಟಿ ಯೋಜನೆ ಜಾರಿಗೆ ಸಮಯ ಬೇಕು: ಕೊಟ್ಟ ಮಾತು ಈಡೇರಿಸುತ್ತೇವೆ- ಡಿಸಿಎಂ ಡಿ.ಕೆ ಶಿವಕುಮಾರ್.

ಬೆಂಗಳೂರು,ಮೇ,29,2023(www.justkannada.in): ಗ್ಯಾರಂಟಿ ಯೋಜನೆ ಜಾರಿಗೆ ಸಮಯ ಬೇಕು. ನಾವು ಕೊಟ್ಟ ಮಾತು ಈಡೇರಿಸುತ್ತೇವೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್  ಹೇಳಿದರು.

ಗ್ಯಾರಂಟಿ ಯೋಜನೆ ಜಾರಿ ಸಂಬಂಧ ಸಿಎಂ ಸಿದ್ದರಾಮಯ್ಯ  ಅಧಿಕಾರಿಗಳ ಜೊತೆ ಸಭೆ ನಡೆಸಲಿದ್ದಾರೆ. ಸಭೆಯಲ್ಲಿ ಹಿರಿಯ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಲಿದ್ದಾರೆ. ಇಂದಿನ ಸಭೆಯಲ್ಲಿ ಗ್ಯಾರಂಟಿಗಳ ಬ್ಲೂಪ್ರಿಂಟ್​​ ಸಿದ್ಧತೆ ಬಗ್ಗೆ ಚರ್ಚೆಯಾಗಲಿದೆ.

ಈ ಕುರಿತು ಮಾತನಾಡಿದ ಡಿಸಿಎಂ ಡಿ.ಕೆ ಶಿವಕುಮಾರ್, ಗ್ಯಾರಂಟಿ ಯೋಜನೆಗಳ ಕುರಿತು ಸಭೆ ನಡೆಯುತ್ತದೆ. ಗ್ಯಾರಂಟಿ ಯೋಜನೆಯ ಬ್ಲೂಪ್ರಿಂಟ್ ರೆಡಿಯಾಗುತ್ತಿದೆ. ಸಂಪುಟ ಸಭೆಗೆ ಬೇಕಾದ ಮಾಹಿತಿ ನೀಡುತ್ತೇವೆ. ಗ್ಯಾರಂಟಿ ಜಾರಿಗೆ ಸಮಯ ಬೇಕು.  ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತೇವೆ ಎಂದು ತಿಳಿಸಿದರು.

Key words: Guarantee scheme – implement-fulfill- our promise-DCM DK Shivakumar.