Friday, August 14, 2026

BDA Apartments

Home Front Page ಜಿಟಿ ದೇವೇಗೌಡರ ಪತ್ನಿ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರಾಗಿದ್ದ ವೇಳೆ ಅವ್ಯವಹಾರ- ಹೊಸ ಬಾಂಬ್ ಸಿಡಿಸಿದ JDS...

ಜಿಟಿ ದೇವೇಗೌಡರ ಪತ್ನಿ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರಾಗಿದ್ದ ವೇಳೆ ಅವ್ಯವಹಾರ- ಹೊಸ ಬಾಂಬ್ ಸಿಡಿಸಿದ JDS ಎಂಎಲ್ ಸಿ

ಮೈಸೂರು,ನವೆಂಬರ್,26,2024 (www.justkannada.in): ಶಾಸಕ ಜಿಟಿ ದೇವೇಗೌಡ ಕಾಂಗ್ರೆಸ್ ಪರ ಓಲೈಕೆ  ಮಾಡುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ  ವಿಧಾನಪರಿಷತ್ ಜೆಡಿಎಸ್ ಸದಸ್ಯ  ಮಂಜೇಗೌಡ ಹೊಸಬಾಂಬ್ ಸಿಡಿಸಿದ್ದಾರೆ.

ಇಂದು ಮಾತನಾಡಿದ ಜೆಡಿಎಸ್ ಎಂಎಲ್ ಸಿ ಮಂಜೇಗೌಡ, ತಮ್ಮ ತಪ್ಪುಗಳನ್ನ ಮುಚ್ಚಿಹಾಕಲು ಜಿಟಿ ದೇವೇಗೌಡರು ಈ ಪ್ರಯತ್ನ ನಡೆಸುತ್ತಿದ್ದಾರೆ. ಜಿಟಿಡಿ ಪತ್ನಿ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರಾದ ವೇಳೆ 19.25 ಕೋಟಿ ಅವ್ಯವಹಾರವಾಗಿದೆ.  ಈ ಬಗ್ಗೆ ಎಫ್ಐಆರ್ ಕೂಡ  ಆಗಿದೆ. ಇದಕ್ಕಾಗಿ ಅಧಿಕಾರದಲ್ಲಿರುವ ಕಾಂಗ್ರೆಸ್ ಓಲೈಕೆ ಮಾಡಿತ್ತಿರಬಹುದು. ಅವರ ಪತ್ನಿಯೇ ಅವ್ಯವಹಾರ ಮಾಡಿದ್ದಾರೆ ಎಂದು ಹೇಳುತ್ತಿಲ್ಲ. ಬದಲಿಗೆ ಅವರು ಅಧ್ಯಕ್ಷರಾದ ವೇಳೆ ಅವ್ಯವಹಾರವಾಗಿದೆ ಎಂದು ಎಫ್ ಐ ಆರ್ ಆಗಿದೆ. ಬೇಕಿದ್ದರೆ ಸಾಕ್ಷ್ಯ ಇದೆ ನೋಡಿ ಎಂದು ಮಾಧ್ಯಮಗಳ ಮುಂದೆ ಎಫ್ ಐ ಆರ್ ಕಾಪಿ ತೋರಿಸಿದರು.

ಶಾಸಕ ಜಿಟಿಡಿ ಗಾಜಿನ ಮನೆಯಲ್ಲಿ ಕುಳಿತು ಹಂಚಿನ ಮನೆಗೆ ಕಲ್ಲು ಹೊಡೆಯುವುದು ಸೂಕ್ತವಲ್ಲ

ಮೂಡ 50:50 ಸೈಟ್ ವಿಚಾರ ಸಂಬಂಧ ಇನ್ನಷ್ಟು ದಿನ ಕಾಯುತ್ತಿದ್ದರೆ ಪಟ್ಟಿಯೇ ಬಿಡುಗಡೆಯಾಗುತ್ತದೆ. ಯಾರದು ಸೈಟ್ ಇದೆ, ಇಲ್ಲ ಎನ್ನುವುದು ಗೊತ್ತಾಗಲಿದೆ. ಶಾಸಕ ಜಿಟಿಡಿ ಗಾಜಿನ ಮನೆಯಲ್ಲಿ ಕುಳಿತು ಹಂಚಿನ ಮನೆಗೆ ಕಲ್ಲು ಹೊಡೆಯುವುದು ಸೂಕ್ತವಲ್ಲ. ಮೂಡಾ ಸೈಟ್ ವಿಚಾರವನ್ನು ಬೆಳಗಾವಿ ಅಧಿವೇಶನದಲ್ಲಿ ಚರ್ಚೆ ಮಾಡುತ್ತೇನೆ. ಮುಡಾದಲ್ಲಿ 50:50 ಅನುಪಾತದಡಿ ಎಷ್ಟು ಜನಕ್ಕೆ ನಿವೇಶನ ಹಂಚಿಕೆಯಾಗಿದೆ ಎಂದು ಈಗಾಗಲೇ ಪ್ರಶ್ನೆ ಎತ್ತಿದ್ದೇನೆ  ಎಂದು  ಎಂ ಎಲ್ ಸಿ ಮಂಜೇಗೌಡ ತಿಳಿಸಿದರು.

Key words: GT Deve Gowda,  wife, Apex Bank, JDS, MLC