Thursday, August 13, 2026

BDA Apartments

Home Front Page ಗೃಹಲಕ್ಷ್ಮೀ ಯೋಜನೆಯ ಅರ್ಜಿ ನಮೂನೆ ಬಿಡುಗಡೆ.

ಗೃಹಲಕ್ಷ್ಮೀ ಯೋಜನೆಯ ಅರ್ಜಿ ನಮೂನೆ ಬಿಡುಗಡೆ.

ಬೆಂಗಳೂರು,ಜೂನ್,8,2023(www.justkannada.in):  ಗೃಹಲಕ್ಷ್ಮೀ ಯೋಜನೆಯ ಅರ್ಜಿ ನಮೂನೆಯನ್ನು ಮಹಿಳಾ & ಮಕ್ಕಳ ಕಲ್ಯಾಣ ಇಲಾಖೆಯು ಬಿಡುಗಡೆ ಮಾಡಿದೆ.

ಭೌತಿಕ ಅರ್ಜಿ ಸಲ್ಲಿಕೆಯ ನಮೂನೆ  ಬಿಡುಗಡೆ ಮಾಡಲಾಗಿದೆ.  ಸಿಎಂ, ಡಿಸಿಎಂ, ಮಹಿಳಾ & ಮಕ್ಕಳ ಕಲ್ಯಾಣ ಸಚಿವ ಸೇರಿಂತೆ ಮೂವರ ಭಾವಚಿತ್ರವಿರುವ ‘ಗೃಹಲಕ್ಷ್ಮೀ’ ಅರ್ಜಿ ನಮೂನೆ ಬಿಡುಗಡೆ ಮಾಡಲಾಗಿದೆ. ಅರ್ಜಿಯಲ್ಲಿ ಜಾತಿ ನಮೂದು ಕಡ್ಡಾಯ.  ಆಧಾರ್ ಗೆ ಲಿಂಕ್ ಹೊಂದಿರುವ ಫೋನ್ ನಂಬರ್ ಕಡ್ಡಾಯ. ಅರ್ಜಿಯಲ್ಲಿ ಪತಿಯ ಆಧಾರ್ ಕಾರ್ಡ್, ವೋಟರ್ ಐಡಿ ಕೇಳಲಾಗಿದೆ.

ಇನ್ನು ಕಂದಾಯ, ಮಹಿಳಾ & ಮಕ್ಕಳ ಕಲ್ಯಾಣ ಇಲಾಖೆ ಸಚಿವರು ಹಾಗೂ ಹಿರಿಯ ಅಧಿಕಾರಿಗಳ ಜೊತೆ ಸಿಎಂ ಸಿದ್ದರಾಮಯ್ಯ ‘ಗೃಹಲಕ್ಷ್ಮೀ’ ಜಾರಿ ಸಂಬಂಧ ಮಧ್ಯಾಹ್ನ 12.30ಕ್ಕೆ ಸಭೆ ನಡೆಸಲಿದ್ದಾರೆ.

Key words: Grilahakshmi Yojana- Application –Form- Released.