Sunday, September 20, 2026

BDA Apartments

ಖಾಸಗಿ ಲ್ಯಾಬ್ ಗಳಲ್ಲಿ ಕೋವಿಡ್ ಟೆಸ್ಟ್ ಗೆ ದರ ನಿಗದಿಗೊಳಿಸಿ ಸರ್ಕಾರ ಆದೇಶ… BD...
Home Front Page ಖಾಸಗಿ ಲ್ಯಾಬ್ ಗಳಲ್ಲಿ ಕೋವಿಡ್ ಟೆಸ್ಟ್ ಗೆ ದರ ನಿಗದಿಗೊಳಿಸಿ ಸರ್ಕಾರ ಆದೇಶ…

ಖಾಸಗಿ ಲ್ಯಾಬ್ ಗಳಲ್ಲಿ ಕೋವಿಡ್ ಟೆಸ್ಟ್ ಗೆ ದರ ನಿಗದಿಗೊಳಿಸಿ ಸರ್ಕಾರ ಆದೇಶ…

ಬೆಂಗಳೂರು,ಜು,24,2020(www.justkannada.in):  ರಾಜ್ಯದಲ್ಲಿ ಕೊರೋನಾ ಅಟ್ಟಹಾಸ ಮುಂದುವರೆದಿದ್ದು,  ಈ ನಡುವೆ ಕೋವಿಡ್ ಟೆಸ್ಟ್ ಗಳ ಸಂಖ್ಯೆಯನ್ನ ಸರ್ಕಾರ ಹೆಚ್ಚಿಸಿದೆ. ಈ ನಡುವೆ  ಖಾಸಗಿ ಲ್ಯಾಬ್‌ಗಳಲ್ಲಿ ಕೋವಿಡ್ ಟೆಸ್ಟ್‌ ಗೆ ದರ  ನಿಗದಿಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಈ ಕುರಿತು ಆರೋಗ್ಯ ಇಲಾಖೆ ಅಧೀನ ಕಾರ್ಯದರ್ಶಿ ಜಾವಿದ್ ಅಕ್ತರ್ ಆದೇಶ ಹೊರಡಿಸಿದ್ದಾರೆ.  ಸರ್ಕಾರ ಕಳುಹಿಸಿದ ಮಾದರಿ ಪರೀಕ್ಷೆಗೆ 2000 ರೂ.ಖಾಸಗಿಯಾಗಿ ಟೆಸ್ಟ್‌ ಮಾಡಿಸಿಕೊಳ್ಳುವವರಿಗೆ 3000 ರೂ. ರ್ಯಾಪಿಡ್ ಆಂಟಿಜಿನ್ ಟೆಸ್ಟ್‌ಗೆ 700. ರೂ  ನಿಗದಿಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.govt-order-covid-test-private-labs

ಈ ಮೂರು ಟೆಸ್ಟ್ ಗಳಿಗೆ ಪಿಪಿಇ ಕಿಟ್, ಸ್ಕ್ರೀನಿಂಗ್ ಟೆಸ್ ಒಳಗೊಂಡಂತೆ ದರ ನಿಗದಿ ಮಾಡಲಾಗಿದೆ. ಐಸಿಎಂಆರ್‌ ಅನುಮೋದಿತ ಲ್ಯಾಬ್‌ಗಳಲ್ಲಿ ಮಾತ್ರ  ಟೆಸ್ಟ್ ಗೆ ಅವಕಾಶ ನೀಡಲಾಗಿದೆ.

Key words: Govt –order- covid test – private- labs