ಪಾರಂಪರಿಕ ಶಾಲೆ ಸಂರಕ್ಷಿಸಲು ವಿಫಲವಾದ ಸರ್ಕಾರ..!

ಬೆಂಗಳೂರು, ಡಿ.16, 2021 : ಕರ್ನಾಟಕದಲ್ಲಿ ಹುಚ್ಚುವೇಗದಲ್ಲಿ ಕಟ್ಟಡಗಳನ್ನು ಉರುಳಿಸಲಾಗುತ್ತಿದೆ, ಆ ಮೂಲಕ ಪಾರಂಪರಿಕ ಕಟ್ಟಡಗಳ ಹಿಂದಿರುವ ಇತಿಹಾಸ, ನೆನಪುಗಳು ಹಾಗೂ ಸಾಂಸ್ಕೃತಿಕ ಚಿಹ್ನೆಗಳನ್ನು ಸಂಪೂರ್ಣವಾಗಿ ಅಳಿಸಲಾಗುತ್ತಿದೆ. ಪುತ್ತೂರಿನ ನೆಲ್ಲಿಕಟ್ಟೆ ಬಳಿಯ ಒಂದು ಸರ್ಕಾರಿ ಶಾಲಾ ಕಟ್ಟಡ ಈ ಪಟ್ಟಿಗೆ ಇತ್ತೀಚೆಗೆ ಸೇರ್ಪಡೆಯಾಗಿದೆ.
ಅದು ಕೇವಲ ಒಂದು ಹಳೆಯ ಶಾಲಾ ಕಟ್ಟಡವಾಗಿತ್ತು. ಆದರೆ ಕಳೆದ ೧೫೬ ವರ್ಷಗಳಿಂದ ಆ ಕಟ್ಟಡ ಸೂರ್ಯನ ಬೆಳಕು, ಮುಂಜಾವಿನ ಮಂಜು, ಮಳೆ, ಧೂಳು ಇತ್ಯಾದಿಗಳಿಗೆ ಸಾಕ್ಷಿಯಾಗಿತ್ತು. ಇತಿಹಾಸದ ಬಗ್ಗೆ ಆಸಕ್ತಿಯನ್ನು ಇರಿಸಿಕೊಂಡಿರುವ ಹಾಗೂ ಮೌಲ್ಯವನ್ನು ನೀಡುವಂತಹವರಿಗೆ ಈಗ, ಅಂದರೆ ಡಿಸೆಂಬರ್ ೧೨, ೨೦೨೧ರಿಂದ ಆ ಕಟ್ಟಡ ಕೇವಲ ಒಂದು ನೆನಪಾಗಿ ಮಾತ್ರ ಉಳಿದುಕೊಂಡಿದೆ.
ಶಿಥಿಲಗೊಂಡಿದ್ದ ನೆಲ್ಲಿಕಟ್ಟೆಯ ಆ ಪ್ರಾಥಮಿಕ ಶಾಲಾ ಕಟ್ಟಡವನ್ನು, ಶಾಲಾ ಅಭಿವೃದ್ಧಿ ಮತ್ತು ನಿಗಾವಣಾ ಸಮಿತಿಯು ರಾತ್ರೋರಾತ್ರಿ ಕೆಡವಿ ಹಾಕಿತು. ಮಧ್ಯರಾತ್ರಿ ನಡೆದ ಈ ಕಟ್ಟಡವನ್ನು ಉರುಳಿಸುವ ಕಾರ್ಯಕ್ಕೆ, ಕಟ್ಟಡವನ್ನು ಉರುಳಿಸುವಲ್ಲಿ ಭಾಗವಹಿಸಿದಂತಹ ಕಾರ್ಮಿಕರನ್ನು ಹೊರತುಪಡಿಸಿದರೆ, ಕಣ್ಣಾರೆ ನೋಡಿರುವಂತಹ ಸಾಕಷ್ಟು ಸಾಕ್ಷಿಗಳೇ ಇಲ್ಲ. ಕಟ್ಟಡ ಬಹಳ ಪುರಾನತವಾಗಿದ್ದ ಕಾರಣದಿಂದಾಗಿ, ಪರಿಸರ ಹಾಗೂ ವಾತಾವರಣದ ಪರಿಣಾಮಗಳು ಹಾಗೂ ಸೂಕ್ತ ನಿರ್ವಹಣೆಯ ಕೊರತೆಯಿಂದಾಗಿ ಅನೇಕ ವರ್ಷಗಳಿಂದ ಬಳಸಲು ಯೋಗ್ಯವಾಗದೇ ಹಾಗೇ ಉಳಿದುಕೊಂಡಿತ್ತು. ನೇರವಾಗಿ ಹೇಳುವುದಾದರೆ ಆ ಕಟ್ಟಡ ಅಸುರಕ್ಷಿತವಾಗಿತ್ತು, ಹಾಗಾಗಿ ಅದನ್ನು ಬಳಸದೇ ಹಾಗೇ ಬಿಡಲಾಗಿತ್ತು.
ವರದಿಗಳ ಪ್ರಕಾರ, ಡಿಸೆಂಬರ್ ೧೧ರಂದು ಕಟ್ಟಡದ ಬಳಿ ಮಕ್ಕಳ ಗುಂಪೊಂದು ಆಟವಾಡುತ್ತಿದ್ದ ಸಮಯದಲ್ಲಿ ಕಟ್ಟಡದ ಒಂದು ಭಾಗ ಉರುಳಿ ಬಿದ್ದಿತ್ತು. ಈ ಹಿನ್ನೆಲೆಯಲ್ಲಿ ತುರ್ತು ಕ್ರಮವಾಗಿ ಎಸ್‌ಡಿಎಂಸಿ, ತನ್ನ ಅತಿ ಬುದ್ಧಿವಂತಿಕೆಯೊಂದಿಗೆ ರಾತ್ರೋರಾತ್ರಿ ಕಟ್ಟಡವನ್ನು ಉರುಳಿಸುವ ಕಾರ್ಯಾಚರಣೆ ನಡೆಸಿತು ಎನ್ನಲಾಗಿದೆ.
ಪರಂಪರೆ
ಆದರೆ ಕತೆ ಇಷ್ಟು ಸರಳವಾಗಿಲ್ಲ. ಈ ಕಟ್ಟಡದ ಇತಿಹಾಸವೇ ಬಹಳ ಕುತೂಹಲಕಾರಿಯಾಗಿದೆ. ೧೮೬೫ರಲ್ಲಿ ಬ್ರಿಟಿಷ್ ಸರ್ಕಾರ ಈ ಪ್ರಾಥಮಿಕ ಶಾಲಾ ಕಟ್ಟಡವನ್ನು ನಿರ್ಮಿಸಿತ್ತು. ಇದು ಪುತ್ತೂರಿನಲ್ಲಿ ಬ್ರಿಟಿಷರು ನಿರ್ಮಿಸಿದಂತಹ ಮೊಟ್ಟ ಮೊದಲ ಶಾಲೆಯಾಗಿತ್ತು.
ಈ ಶಾಲೆ ೩.೨೬ ಎಕರೆ ಪ್ರದೇಶ ವ್ಯಾಪ್ತಿಯಲ್ಲಿ ನಿರ್ಮಾಣಗೊಂಡಿತ್ತು ಹಾಗೂ ಸರ್ಕಾರಿ ಬಸ್ ನಿಲ್ದಾಣಕ್ಕೆ ಬಹಳ ಹತ್ತಿರದಲ್ಲಿತ್ತು. ಸ್ವಾತಂತ್ರ್ಯ ನಂತರದಲ್ಲಿ ಇದನ್ನು ಹಿರಿಯ ಪ್ರಾಥಮಿಕ ಶಾಲೆಯನ್ನಾಗಿ ಉನ್ನತೀಕರಿಸಲಾಗಿತ್ತು. ದಶಕಗಳಿಂದ ಈ ಕಟ್ಟಡ ನೋಡಲು ಬಹಳ ಆಕರ್ಷವಾಗಿತ್ತು. ಆಕರ್ಷಕ ಅಡಿಪಾಯ, ದೊಡ್ಡ ದೊಡ್ಡ ಸ್ತಂಭಗಳು ಹಾಗೂ ಮರದ ತೊಲೆಗಳು ಇದರ ಪ್ರಮುಖ ಆಕರ್ಷಣೆಗಳಾಗಿದ್ದವು. ಕಟ್ಟಡದ ನಿರ್ಮಾಣಕ್ಕೆ ಬಳಸಿದ್ದಂತಹ ದೊಡ್ಡ ಗಾತ್ರದ ಕೆಂಪು ಬಣ್ಣದ ಲ್ಯಾಟರೈಟ್ ಕಲ್ಲುಗಳು ಈ ಕಟ್ಟಡಕ್ಕೆ ಮತ್ತಷ್ಟು ಮೆರುಗನ್ನು ನೀಡಿತ್ತು.
ಈ ಕಟ್ಟಡ ಬಳಸಲು ‘ಅಸುರಕ್ಷಿತ’ ಎಂದು ಗುರುತಿಸಿದ ನಂತರ, ತರಗತಿಗಳನ್ನು ಹತ್ತಿರದ ಇತರೆ ಕಟ್ಟಡಗಳಿಗೆ ಸ್ಥಳಾಂತರಿಸಲಾಯಿತು. ಈ ಶಾಲೆಯಲ್ಲಿ ೧೦೦ಕ್ಕಿಂತಲೂ ಕಡಿಮೆ ಸಂಖ್ಯೆಯ ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳಲಾಗಿತ್ತು. ಈ ಕಟ್ಟಡದಲ್ಲಿ ನಡೆಸುತ್ತಿದ್ದ ಕಾಲೇಜು ತರಗತಿಗಳನ್ನೂ ಸಹ ಬಹಳ ಹಿಂದೆಯೇ ಸ್ಥಳಾಂತರಿಸಲಾಗಿತ್ತು.
ಲಭ್ಯವಿರುವ ಮಾಹಿತಿಯ ಪ್ರಕಾರ ಕನ್ನಡ ಸಾರಸ್ವತ ಲೋಕದ ದಿಗ್ಗಜ ಡಾ. ಶಿವರಾಂ ಕಾರಂತರು, ೧೯೩೫ರಿಂದಲೂ ಈ ಶಾಲೆಯ ಆವರಣದಲ್ಲಿ ನೃತ್ಯ ಹಾಗೂ ನಾಟಕಗಳು ಒಳಗೊಂಡಂತೆ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸಲು ಬಳಸಿಕೊಳ್ಳುತ್ತಿದ್ದರು.
ಈ ಕಟ್ಟಡದ ಮಧ್ಯ ಭಾಗದಲ್ಲಿ ಗ್ರೀಕ್-ಶೈಲಿಯ ರಂಗವೇದಿಕೆಯನ್ನು ಹೋಲುವ ಒಂದು ಸಣ್ಣ ಹಜಾರವಿತ್ತು. ವೇದಿಕೆಯನ್ನು ತಲುಪಲು ಮೆಟ್ಟಿಲುಗಳಿದ್ದವು. ಒಂದು ಕಾಲದಲ್ಲಿ ಈ ಶಾಲೆಯಲ್ಲಿ ಕನಿಷ್ಠ ೭೦೦ ರಿಂದ ೮೦೦ ವಿದ್ಯಾರ್ಥಿಗಳು ವಿದ್ಯಾಭ್ಯಾಸವನ್ನು ನಡೆಸುತ್ತಿದ್ದರು. ಈ ಶಾಲಾ ಕಟ್ಟಡ ಪುತ್ತೂರಿನ ಮೊಟ್ಟ ಮೊದಲ ದಸರಾಗೆ ಸಾಕ್ಷಿಯಾಗಿತ್ತು ಹಾಗೂ ಪಟ್ಟಣದ ಮೊಟ್ಟ ಮೊದಲ ಗಣೇಶ ಉತ್ಸವದ ಕೇಂದ್ರ ಸ್ಥಾನವಾಗಿತ್ತು.
ಎಸ್‌ಡಿಎಂಸಿ ಹಾಗೂ ಇನ್ನೂ ಹಲವಾರು ವ್ಯಕ್ತಿಗಳು ಶಿಥಿಲಗೊಂಡಿದ್ದ ಈ ಪಾರಂಪರಿಕ ಕಟ್ಟಡವನ್ನು ನವೀಕರಿಸುವಂತೆ ಸರ್ಕಾರವನ್ನು ಕೋರಿದ್ದರು, ಆದರೆ ಅವರ ಬೇಡಿಕೆ ಯಾವುದೇ ಫಲ ನೀಡಿರಲಿಲ್ಲ. ಕಳೆದ ೧೦ ವರ್ಷಗಳಿಂದಲೂ ಈ ಕಟ್ಟಡದ ನವೀಕರಣಕ್ಕಾಗಿ ಸರ್ಕಾರದ ವತಿಯಿಂದ ಹಣ ಪಡೆಯಲು ಅನೇಕ ಬಾರಿ ಪ್ರಯತ್ನಿಸಲಾಗಿತ್ತು. ಪಟ್ಟಣದ ಅನೇಕ ಪ್ರಮುಖ ಸ್ಥಳೀಯರು ಈ ಪಾರಂಪರಿಕ ಕಟ್ಟಡವನ್ನು ಉಳಿಸಿಕೊಳ್ಳಲು ಪ್ರಯತ್ನ ಹಾಗೂ ಹೋರಾಟಗಳನ್ನು ಮಾಡಿದ್ದರು.
ಎಸ್‌ಡಿಎಂಸಿ ಪ್ರಕಾರ ಈ ಕಟ್ಟಡದ ಛಾವಣಿ ಭಾನುವಾರದಂದು ಉರುಳಿತಂತೆ, ಹಾಗೂ ಅಂತಿಮವಾಗಿ ಇಡೀ ಕಟ್ಟಡ ತನ್ನಿಂದ ತಾನೆ ಉರುಳಿ ಹೋಯಿತು ಎನ್ನುತ್ತಾರೆ. ಈ ಕಟ್ಟಡದ ನವೀಕರಣಕ್ಕಾಗಿ ಆರಂಭಿಕವಾಗಿ ಕೇವಲ ರೂ.೫೦ ಲಕ್ಷವನ್ನು ಕೋರಲಾಗಿತ್ತಂತೆ.
ಈಗ ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಗಳು ತಾಲ್ಲೂಕು ಶಿಕ್ಷಣ ಅಧಿಕಾರಿ ಹಾಗೂ ಇತರೆ ಅಧಿಕಾರಿಗಳನ್ನು ಈ ಸಂಬಂಧ ಒಂದು ವಿವರವಾದ ವರದಿಯನ್ನು ನೀಡುವಂತೆ ಆದೇಶಿಸಿದ್ದಾರೆ. ಆದರೆ ಈ ರೀತಿಯ ಪ್ರತಿಕ್ರಿಯೆ ಯಾವುದೇ ರೀತಿಯ ಫಲಿತಾಂಶವನ್ನೂ ನೀಡುವುದಿಲ್ಲ, ಏಕೆಂದರೆ ಈಗಾಗಲೇ ಕಟ್ಟಡ ನೆಲಸಮವಾಗಿದೆ.
ಪಟ್ಟಭದ್ರ ಹಿತಾಸಕ್ತಿ?
ಇಷ್ಟು ಶ್ರೀಮಂತ ಇತಿಹಾಸದ ಹಿನ್ನೆಲೆಯನ್ನು ಹೊಂದಿರುವ ಈ ಅದ್ಭುತ ಪಾರಂಪರಿಕ ಕಟ್ಟಡ ಉರುಳಿಸಿರುವುದಕ್ಕೆ ಸಂಬಂಧಿಸಿದಂತೆ, ಸಂಬಂಧಪಟ್ಟ ಜನರ ಅತ್ಯಂತ ಸಾಧಾರಣ ಪ್ರತಿಕ್ರಿಯೆ ಈಗ ಸ್ಥಳೀಯರನ್ನು ಕೆರಳಿಸಿದೆ. ಪಟ್ಟಣದ ನಿವಾಸಿ, ಸಾಮಾಜಿಕ ಕಾರ್ಯಕರ್ತ ಸದಾಶಿವ್ ಪೈ ಅವರ ಹೇಳಿದಂತೆ, ಒಂದು ದೊಡ್ಡ ಪ್ರಮಾದವೇ ನಡೆದುಹೋಗಿದೆ. “ಸರ್ಕಾರ ಅಥವಾ ಎಸ್‌ಡಿಎಂಸಿ ಶಾಲೆಯ ಹಳೆಯ ವಿದ್ಯಾರ್ಥಿ ಬಳಗದಿಂದ ನಿಧಿಯನ್ನು ಕ್ರೋಢಿರಿಸಬಹುದಿತ್ತು. ಪುತ್ತೂರಿನ ಆನಂದ ಆಶ್ರಮದ ಮಾಲೀಕರು ಹಾಗೂ ಪ್ರಸಿದ್ಧ ವೈದ್ಯರಾದ ಡಾ. ಗೌರಿ ಪೈ ಅವರು ಈ ನೀಲಕಟ್ಟೆ ಶಾಲೆಯಲ್ಲಿ ಓದಿದ್ದಾರೆ. ಸಮಿತಿಯವರು ಡಾ. ಗೌರಿ ಹಾಗೂ ಅಂತಹ ಹಳೆಯ ವಿದ್ಯಾರ್ಥಿಗಳನ್ನೊಮ್ಮೆ ಭೇಟಿ ಮಾಡಿ ಪರಿಸ್ಥಿತಿಯನ್ನು ವಿವರಿಸಿದ್ದರೆ, ಎಲ್ಲರೂ ತಮ್ಮ ಕೈಲಾದ ಸಹಾಯವನ್ನು ಮಾಡಲು ಹೆಮ್ಮೆ ಪಡುತ್ತಿದ್ದರು. ಈ ರೀತಿ ಆ ಕಟ್ಟಡದ ನವೀಕರಣಕ್ಕೆ ಬೇಕಾಗಿದ್ದಂತಹ ನಿಧಿಯನ್ನು ಕ್ರೋಢೀಕರಿಸಲು ಒಂದು ಸಮಿತಿಯನ್ನು ರಚಿಸಬಹುದಾಗಿತ್ತು,” ಎಂದು ಅಸಮಾಧಾನವನ್ನು ವ್ಯಕ್ತಪಡಿಸಿದರು.
ಪೈ ಅವರ ಪ್ರಕಾರ ಎಸ್‌ಡಿಎಂಸಿಗಳು ರಾಜಕೀಯ ಅಂಗಗಳಂತೆ ನಡೆದುಕೊಳುತ್ತವೆ. ಸರ್ಕಾರ ತನ್ನ ಜವಾಬ್ದಾರಿಯನ್ನು ಎಸ್‌ಡಿಎಂಸಿಗಳಿಗೆ ಹಸ್ತಾಂತರಿಸಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ. “ಕಟ್ಟಡವನ್ನು ಸಂರಕ್ಷಿಸುವ ಬದಲಿಗೆ, ರಾತ್ರೋರಾತ್ರಿ ಅದನ್ನು ಕೆಡವಿಹಾಕಲಾಗಿದೆ. ಇಂತಹ ಸೂಕ್ಷ್ಮ ವಿಚಾರಗಳನ್ನು ನಿರ್ವಹಿಸಲು ಎಸ್‌ಡಿಎಂಸಿಗೆ ಅಧಿಕಾರವಿದೆಯೇ? ಯಾವುದೇ ಸಾರ್ವಜನಿಕ ಸೂಚನೆಯನ್ನು ನೀಡದೆ, ಈ ಕಟ್ಟಡವನ್ನು ಕೆಡವಲು ಹೇಗೆ ನಿರ್ಧರಿಸಿದರು? ನಮ್ಮ ಪ್ರದೇಶದಲ್ಲಿದಂತಹ ಒಂದೇ ಒಂದು ಪುರಾತನ ಹಾಗೂ ಪಾರಂಪರಿಕ ಕಟ್ಟಡವನ್ನು ನಾವು ಈಗ ಕಳೆದುಕೊಂಡಿದ್ದೇವೆ. ಸುರಕ್ಷತೆಯ ವಿಚಾರಕ್ಕಿಂತ, ಇದರ ಹಿಂದೆ ಪಟ್ಟಭದ್ರ ಹಿತಾಸಕ್ತಿ ಇದೆ ಅಥವಾ ರಾಜಕೀಯ ಕೈವಾಡವಿದೆ ಎಂದು ನನಗನಿಸುತ್ತದೆ,” ಎನ್ನುತ್ತಾರೆ ಪೈ.
ನೀಲಕಟ್ಟೆ ಶಾಲಾ ಕಟ್ಟಡದಂತಹ, ಒಂದು ಪಾಳುಬಿದ್ದ, ಅಸುರಕ್ಷಿತವಾದ ಶಾಲಾ ಕಟ್ಟಡದೊಳಗೆ ಯಾರಾದರೂ ಏಕೆ ಹೋಗಬೇಕು ಎಂದೇ ಅರ್ಥವಾಗುವುದಿಲ್ಲ. ಒಂದು ಎಚ್ಚರಿಕೆ ನೀಡುವ ಸೂಚನಾ ಫಲಕವನ್ನು ಪ್ರದರ್ಶಿಸಿ, ಇಲ್ಲಿ ಯಾರೂ ಪ್ರವೇಶಿಸುವಂತಿಲ್ಲ ಎಂದು ನಿರ್ಬಂಧ ಹೇರಿದ್ದರೆ ಆಗುತಿತ್ತು. ಈ ರೀತಿ ಪಾಳುಬಿದ್ದಂತಹ ಅಥವಾ ಉಪಯೋಗಿಸದೆ ಇರುವಂತಹ ಶಾಲಾ ಕಟ್ಟಡಗಳಿಗೆ ಸೂಕ್ತ ರಕ್ಷಣೆ ಕಲ್ಪಿಸದೇ ಇದ್ದರೆ ಅವುಗಳು ಕಾನೂನುಬಾಹಿರ ಚಟುವಟಿಕೆಗಳ ತಾಣಗಳಾಗುತ್ತವೆ.
ನೆಲ್ಲಿಕಟ್ಟೆ ಶಾಲಾ ಕಟ್ಟಡದಂತಹ ಒಂದು ಹಳೆಯ ಕಟ್ಟಡ ತಾನಾಗಿಯೇ ಉರುಳಿಬಿದ್ದರೆ ಅದರ ಅವಶೇಷಗಳು ಈ ರೀತಿ ಇರುವುದಿಲ್ಲ. ಆದರೆ ಈಗ ವಿಳಂಬವಾಗಿದೆ. ಐತಿಹಾಸಿಕ ಕಟ್ಟಡವೊಂದಕ್ಕೆ ಯಾವುದೇ ರೀತಿಯ ಗೌರವವನ್ನೂ ನೀಡದೆ ಅದು ನಾಶವಾಗಿದೆ. ಎಸ್‌ಡಿಎಂಸಿಗಿಂತ ಹೆಚ್ಚಾಗಿ ಶಿಕ್ಷಣ ಇಲಾಖೆ ಹಾಗೂ ಸರ್ಕಾರದ ನಿರ್ಲಕ್ಷ್ಯವನ್ನು ದೂಷಿಸಬೇಕಾಗಿದೆ.
ಕೆಲವು ವರ್ಷಗಳ ಹಿಂದೆ ಬೆಂಗಳೂರಿನ ಲಾಲ್‌ಬಾಗ್‌ನಲ್ಲಿರುವ ಶತಮಾನದಷ್ಟು ಹಳೆಯದಾದ ಗುಸ್ತವ್ ಹರ್‌ಮನ್ನ್ ಕೃಂಬಿಗಲ್ ಹಾಲ್ ಉರುಳಿತು. ಆದರೆ ಅದೇ ಸ್ಥಳದಲ್ಲಿ ಅನೇಕ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸಲು ಹಳೆಯ ಕಟ್ಟಡವನ್ನೇ ಹೋಲುವಂತೆ ಹೊಸ ಕಟ್ಟಡವನ್ನು ನಿರ್ಮಿಸಲಾಯಿತು.
ಈಗ ನೆಲ್ಲಿಕಟ್ಟೆ ಶಾಲಾ ಕಟ್ಟಡದ ವಿಷಯದಲ್ಲಿಯೂ ಅದೇ ರೀತಿಯ ಪ್ರಯತ್ನಗಳಾಗಬೇಕಿದೆ. ಜೊತೆಗೆ, ಈ ಪಾರಂಪರಿಕ ಕಟ್ಟಡವನ್ನು ಉರುಳಿಸಲು ನಿರ್ಧಾರವನ್ನು ತೆಗೆದುಕೊಂಡವರ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳಬೇಕಿದೆ. ಇದು, ಕಟ್ಟಡವನ್ನು ನಾಶಪಡಿಸುವ ಉದ್ದೇಶವನ್ನು ಹೊಂದಿದ್ದ ಜನರ ಸಂಘಟಿತ ಪ್ರಯತ್ನವೇ ಅನಿಸುತ್ತದೆ. ಏಕೆಂದರೆ ಆ ಶಾಲಾ ಕಟ್ಟಡವಿರುವ ಸ್ಥಳವೇ ಅಂತದ್ದು, ಪಟ್ಟಣದ ಮಧ್ಯಭಾಗದಲ್ಲಿ ಬಹಳ ಪ್ರಮುಖವಾದ ಸ್ಥಳ. ಆಶ್ಚರ್ಯವೇನೆಂದರೆ ಪುತ್ತೂರಿನ ಯಾವುದೇ ಚುನಾಯಿತ ಪ್ರತಿನಿಧಿಗಳೂ ಸಹ ಈ ವಿಷಯದ ಬಗ್ಗೆ ಉದ್ಘಾರವೇ ಎತ್ತದಿರುವುದು.
– ಆಶಾ ಕೃಷ್ಣಸ್ವಾಮಿ, ಹಿರಿಯ ಪತ್ರಕರ್ತರು, ಬೆಂಗಳೂರು.

Key words: Govt-fails – conserve -heritage school – Puttur

ENGLISH SUMMARY….

Who owns heritage buildings in Karnataka?
Or
Govt fails to conserve a heritage school in Puttur
Buildings are being demolished at a frenetic pace in Karnataka, wiping out their histories, memories, and cultural symbols. The government school building at Nellikatte, located in Puttur, has been added to the list. There was more to it than just an old school. Over the last 156 years, it has seen light, dusk, dust, and more. For those who value history, the building has become just a memory since December 12, 2021.
The dilapidated Nellikatte primary school was razed to the ground at around midnight, reportedly by its School Development and Monitoring Committee. There aren’t many eyewitnesses to this midnight operation demolition, except probably the operators of the earthmovers. The building, due to the age factor, the vagaries of weather, and lack of maintenance, had become unfit for occupation for very many years. In a way, it was an abandoned, unsafe building. Reportedly, a portion of the building collapsed when children were in the vicinity on December 11. As an urgent measure, the SDMC, in its super wisdom, carried out the night operation, it is said.
Heritage
The story is not as simple as this. The building’s past is very interesting. In 1865, the British government constructed this elementary school. This was the first school established by the British in Puttur. The area is about 3,26 acres and is located close to the government bus stand. It was upgraded to a higher primary school after Independence. For decades, the building was impressive, with a good foundation, bulky pillars, and wooden beams. Huge red laterite stones had given it a majestic look.
With the building getting the tag of unsafe, the classes were shifted to the nearby buildings. Less than 100 students have enrolled. The colleges run here were also shifted a long time back.
It is said that for a decade since 1935, Dr. Shivaram Karanth, the literary giant, used the school premises for conducting cultural activities, including dance and drama. There was a small hall with a Greek-style theatre in the centre. There were steps to reach the stage below. No less than 700 to 800 students used to be there in a year. The school witnessed Puttur’s first Dasara and hosted the town’s first public Ganesh Utsava.
The SDMC and several individuals had pressured the government to renovate the fragile heritage building, but to no avail. In the last 10 years, efforts have been made to get funding from the government to renovate the building. Many prominent locals in the town have been fighting for the preservation of the heritage building. According to the SDMC, the roof had fallen last Sunday, and finally, it collapsed on its own. The demand for initial grants was just about Rs 50 lakh.
Now the block education officer and other officers have been asked by the Dakshina Kannada Deputy Commissioner to submit an inquiry report. This sort of exercise serves no purpose because the building has turned into rubble.
Vested interests?
The locals are furious now at the casual approach of the people concerned about pulling down the building. Sadashiv Pai, a social worker in the town, says a great blunder has been committed. “The government or SDMC should have raised funds from the alumni of the school. Dr. Gowri Pai, the well-known doctor and owner of the Anand Ashram in Puttur, attended the Nellikatteschool. The committee could have tapped Dr. Gowri and more such alumni who are the proud students and achievers of the school. A committee should have been formed to ideate and raise funds, “he says.
Pai pointed out that the SDMCs are like political bodies. The government has shifted its responsibility to the SDMCs, which is not good. “Instead of preserving the building, overnight, it has been pulled down. Is the SDMC authorised to handle such sensitive issues? Without issuing a public notification regarding it, how come it was decided to do away with the building? We lost one of the oldest buildings in the region. More than a safety issue, there must be some vested interest or political lobby behind the demolition, “Pai says.
It is difficult to understand why anyone should have to step into an abandoned, unsafe school, such as the Nellikatte School. This could have been restricted if it had been cordoned off with a caution notice. Unless abandoned buildings are protected, they will become dens of illegal activity. A building that falls on its own won’t become rubble like the Nellikatte school. Anyhow, the damage has been done with the least respect for history. More than the SDMC, it is the education department and government that have to be blamed for neglecting it over the decades.
The century-old Gustav Hermann Krumbigel hall at Lalbagh in Bengaluru collapsed some years ago. A new building resembling the old one has been constructed to house many cultural activities. Now, similar efforts are required for the Nellikatte school building. It is also time to take stringent action against those who decided to pull down the heritage building. It looks like a collective effort by people associated with the building to vandalise it. After all, it is prime land in the centre of the town. It’s strange that no elected representative of Puttur is addressing the issue.
– Asha Krishnaswamy