ಸರ್ಕಾರದ ವಿರುದ್ಧ 40% ಕಮಿಷನ್ ಆರೋಪ; ನ್ಯಾಯಾಂಗ ತನಿಖೆಗೆ ಆಗ್ರಹಿಸಿದ ಸಿದ್ಧರಾಮಯ್ಯ.

ಬೆಳಗಾವಿ,ಡಿಸೆಂಬರ್,16,2021(www.justkannada.in): ಸರ್ಕಾರದ ವಿರುದ್ಧ ಕೇಳಿ ಬಂದಿರುವ 40% ಕಮಿಷನ್  ಆರೋಪ ಕುರಿತು ನ್ಯಾಯಾಂಗ ತನಿಖೆಯಾಗಲಿ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ಧರಾಮಯ್ಯ ಆಗ್ರಹಿಸಿದ್ದಾರೆ.

ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಇಂದು ಕಾಂಗ್ರೆಸ್ ಪ್ರತಿಭಟನಾ ರ್ಯಾಲಿ ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ, ಸರ್ಕಾರದ ವಿರುದ್ಧ ಗುತ್ತಿಗೆದಾರ ಸಂಘದ ಅಧ್ಯಕ್ಷ ಕೆಂಪಣ್ಣ 40% ಕಮಿಷನ್ ಆರೋಪ ಮಾಡಿದ್ದಾರೆ.  ಈ ಆರೋಪದ ಬಗ್ಗೆ  ತನಿಖೆ ಮಾಡಿಸಿ. ನ್ಯಾಯಾಂಗ  ಅಥವಾ ಸದನ ಸಮಿತಿಯಿಂದ ತನಿಖೆ ಮಾಡಿಸಿ ನನ್ನನ್ನು ಸೇರಿಸಿ ತನಿಖೆ ಮಾಡಿಸಿ. ನನ್ನ ಅವಧಿಯಲ್ಲಿ ಅಕ್ರಮವಾಗಿದ್ರೆ ತನಿಖೆಯಾಗಲಿ ಎಂದು ಒತ್ತಾಯಿಸಿದರು.

ರೈತರಿಗೆ ಬೆಳೆ ಪರಿಹಾರ ಕೊಟ್ಟಿಲ್ಲ. ಕೂಡಲೇ ರಾಜ್ಯ ಸರ್ಕಾರ ಪರಿಹಾರವನ್ನ ನೀಡಬೇಕು ಇದು 40% ಸರ್ಕಾರ ಬಿಟ್ ಕಾಯಿನ್ ಸರ್ಕಾರ.  ಜನರ ಹಿತವನ್ನ ಮರೆತಿದೆ ಎಂದು ಕಿಡಿಕಾರಿದರು.

Key words: 40% commission- charge- against- government-Siddaramaiah -judicial probe