Friday, August 14, 2026

BDA Apartments

Home Front Page 15 ಬಿಲ್ ಗಳು ವಾಪಸ್:  ರಾಜ್ಯಪಾಲರ ನಡೆಗೆ ಡಿಸಿಎಂ ಡಿಕೆ ಶಿವಕುಮಾರ್ ಅಸಮಾಧಾನ

15 ಬಿಲ್ ಗಳು ವಾಪಸ್:  ರಾಜ್ಯಪಾಲರ ನಡೆಗೆ ಡಿಸಿಎಂ ಡಿಕೆ ಶಿವಕುಮಾರ್ ಅಸಮಾಧಾನ

ಬೆಂಗಳೂರು,ಆಗಸ್ಟ್,23,2024 (www.justkannada.in): ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ದ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ ಬೆನ್ನಲ್ಲೆ ರಾಜ್ಯಪಾಲರು ಮತ್ತು ಸರ್ಕಾರದ ನಡುವೆ ಸಂಘರ್ಷ ಉಂಟಾಗಿತ್ತು. ಇದೀಗ ರಾಜ್ಯಪಾಲರು15 ಬಿಲ್ ಗಳು ವಾಪಸ್ ಕಳುಹಿಸಿದ್ದಾರೆಂದು ಡಿಸಿಎಂ ಡಿಕೆ ಶಿವಕುಮಾರ್  ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾತನಾಡಿರುವ ಡಿಕೆ ಶಿವಕುಮಾರ್ , ರಾಜ್ಯಪಾಲರು 15 ಬಿಲ್ ಗಳನ್ನ ವಾಪಸ್ ಕಳುಹಿಸಿದ್ದಾರೆ. ಬಿಜೆಪಿ ನಾಯಕರು ಹೇಳಿದ್ದಕ್ಕೆ ವಾಪಸ್ ಕಳುಹಿಸಿದ್ದಾರೆ. ರಾಜ್ಯಪಾಲರಿಗೆ ದೇವರು ಒಳ್ಳೆಯ ಬುದ್ದಿ ಕೊಡಲಿ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಗವರ್ನರ್ ನಿರ್ಧಾರ ಎಷ್ಟು ಸರಿ ಎಂದು ಪ್ರಶ್ನಿಸಿರುವ ಡಿಕೆ ಶಿವಕುಮಾರ್, ಏನೇ ಮಾಡಿದರೂ ಸರ್ಕಾರ ಬೀಳಿಸೋಕೆ ಸಾಧ್ಯವಿಲ್ಲ.  ಸರ್ಕಾರ ಬೀಳಿಸಲು ಯತ್ನಿಸಿದ್ರೆ ಸುಮ್ಮನಿರಲ್ಲ.  ನಾವು ನಮ್ಮ ಕೆಲಸ ಮಾಡುತ್ತೇವೆ  ಎಂದು ಎಚ್ಚರಿಕೆ ನೀಡಿದರು.

Key words: Governor, 15 bills, returned, DCM, DK Shivakumar