“ಸರ್ಕಾರ ಪೂರ್ಣವಾಗಿ ಮುಂದುವರೆಯುತ್ತೆ” : ಸಚಿವ ಕೆ.ಎಸ್.ಈಶ್ವರಪ್ಪ

ಮೈಸೂರು,17,2021(www.justkannada.in) : ಸಿದ್ದರಾಮಯ್ಯನವರು ರೀತಿ ಹೇಳುತ್ತಿರುವುದು ಇದೇ ಮೊದಲೇನಲ್ಲ. ಬದಲಾವಣೆ ಆಗುತ್ತೆ ಅಂತ ಒಂದು ನೂರು ಸಾರಿ ಹೇಳಿದ್ದಾರೆ. ಅವರು ಹೇಳ್ತಾನೆ ಇರಲಿ, ಸರ್ಕಾರ ಪೂರ್ಣವಾಗಿ ಮುಂದುವರೆಯುತ್ತೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.jk-logo-justkannada-mysore

ಏಪ್ರಿಲ್ ನಂತರ ರಾಜ್ಯದಲ್ಲಿ ಸಿಎಂ ಬದಲಾವಣೆ ಆಗುತ್ತಾರೆಂಬ ಸಿದ್ದರಾಮಯ್ಯ ಹೇಳಿಕೆ ವಿರುದ್ಧ ಕಿಡಿಕಾರಿದ ಅವರು, ಸಿದ್ದರಾಮಯ್ಯ ಗ್ರಾಮ ಪಂಚಾಯಿತಿ ಚುನಾವಣೆ ಮೊದಲು ಹಾಗೂ ಗ್ರಾಪಂ ಚುನಾವಣೆ ಬಳಿಕ ಸಿಎಂ ಬದಲಾಗ್ತಾರೆ ಅಂತ ಹೇಳಿದ್ದರು. ಶಿರಾ, ಆರ್.ಆರ್. ನಗರ ಉಪಚುನಾವಣೆ ಸಂದರ್ಭದಲ್ಲೂ ಇದನ್ನೇ ಹೇಳಿದ್ದರು ಎಂದು ಟೀಕಿಸಿದರು.

ಕುರಬರ ಎಸ್ಟಿ ಮೀಸಲಾತಿ ಹೋರಾಟ Government,continues,full force,Minister,K.S. Eshwarappa

ಕೃಪೆ- internet

ಯಾವ ಸಿಡಿನೂ ಇಲ್ಲ, ಸುಮ್ನೆ ಬಾಯಿಗೆ ಬಂದ್ಹಾಗೆ ಮಾತಾಡ್ತಾರೆ. ಈಗಾಗಲೇ ಜನವರಿ ೧೫ರಿಂದ ಸ್ವಾಮೀಜಿಗಳ ನೇತೃತ್ವದಲ್ಲಿ ಪಾದಯಾತ್ರೆ ಅಭೂತಪೂರ್ವವಾಗಿ ನಡೆಯುತ್ತಿದೆ. ನಿರೀಕ್ಷೆಗೂ ಮೀರಿ ಜನ ಸೇರುತ್ತಿದ್ದಾರೆ, ಬೆಂಬಲ ಕೊಡುತ್ತಿದ್ದಾರೆ. ಪಾದಯಾತ್ರೆ ಬಳಿಕ ಫೆಬ್ರವರಿ ೭ರಂದು ಬೆಂಗಳೂರಿನಲ್ಲಿ ಸುಮಾರು ೧೦ ಲಕ್ಷದಷ್ಟು ಜನರು ಸೇರುವ ನಿರೀಕ್ಷೆಯಿದೆ. ಎಸ್ಟಿ ಹೋರಾಟದ ವಿಚಾರವಾಗಿ ಕೆಲವು ಪ್ರಮುಖರೆಲ್ಲರೂ ಬನ್ನಿ ಎಂದಿದ್ದರು ಹಾಗಾಗಿ ಬಂದಿದ್ದೇನೆ ಎಂದು ತಿಳಿಸಿದರು.

key words : Government-continues-full force-Minister-K.S. Eshwarappa