ಕಾಟಾಚಾರಕ್ಕೆ ಬರದ ಸರ್ವೇ: ಸರ್ಕಾರಕ್ಕೆ ರೈತರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ- ವಿಪಕ್ಷ ನಾಯಕ ಆರ್.ಅಶೋಕ್ ಕಿಡಿ.

ಕಲ್ಬುರ್ಗಿ,ನವೆಂಬರ್,21,2023(www.justkannada.in): ಕಲ್ಬುರ್ಗಿ  ಜಿಲ್ಲೆಯಲ್ಲಿ ಕಾಟಾಚಾರಕ್ಕೆ ಬರದ ಸರ್ವೆ ಆಗಿದೆ.  ರಾಜ್ಯ ಕಾಂಗ್ರೆಸ್  ಸರ್ಕಾರಕ್ಕೆ ರೈತರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ ಎಂದು ವಿಪಕ್ಷ ನಾಯಕ ಆರ್,ಅಶೋಕ್ ತಿಳಿಸಿದರು.

ಕಲ್ಬುರ್ಗಿ ಜಿಲ್ಲಾ ಪ್ರವಾಸ ಕೈಗೊಂಡಿರುವ ವಿಪಕ್ಷ ನಾಯಕ ಆರ್.ಅಶೋಕ್ ಮಾಧ್ಯಮಗಳ ಜೊತೆ ಮಾತನಾಡಿ, ನಾನು ಕಲ್ಬುರ್ಗಿಯಿಂದಲೇ  ಜಿಲ್ಲಾ ಪ್ರವಾಸ ಆರಂಭಿಸಿದ್ದೇನೆ.  ಈ ಸರ್ಕಾರಕ್ಕೆ ರೈತರ ಬಗ್ಗೆಕಿಂಚಿತ್ತೂ ಕಾಳಜಿ ತೋರಿಸುತ್ತಿಲ್ಲ. ಹೀಗಾಗಿ  ವಿರೋಧ ಪಕ್ಷವಾಗಿ ಸರ್ಕಾರವನ್ನ ಎಚ್ಚರಿಸುವ ಕೆಲಸ ಮಾಡುತ್ತೇವೆ ಎಂದರು.

ಈ ಹಿಂದೆ  ನಾವು ನಮ್ಮ ಖಜಾನೆಯಿಂದಲೇ ಪರಿಹಾರ ನೀಡಿದ್ದವು. ಆದರೆ ಈಗ ಸರ್ಕಾರ ರೈತರಿಗೆ ಪರಿಹಾರ ನೀಡಿಲ್ಲ  ಎಂದು ಆರ್.ಅಶೋಕ್ ಕಿಡಿಕಾರಿದರು.

Key words: government does- not care – farmers – Opposition leader -R. Ashok