ಈ ಬಾರಿ ಸರಳ ದಸರಾ ಆಚರಣೆಗೆ ಸರ್ಕಾರ ನಿರ್ಧಾರ.

ಮೈಸೂರು,ಸೆಪ್ಟಂಬರ್,22,2023(www.justkannada.in):  ರಾಜ್ಯದಲ್ಲಿ ಸರಿಯಾಗಿ ಮಳೆಯಾಗದೇ ಎಲ್ಲಾ ಜಲಾಶಯಗಳು ಭರ್ತಿಯಾಗದೇ ಬರಪರಿಸ್ಥಿತಿ ಆವರಿಸಿದೆ. ಈ ಹಿನ್ನೆಲೆಯಲ್ಲಿ ಈ ಬಾರಿ ಸರಳ ದಸರಾ ಆಚರಣೆಗೆ ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ.

ವಿಶ್ವವಿಖ್ಯಾತ ಮೈಸೂರು ದಸರಾ 2023 ಆಚರಣೆಗೆ ಸಜ್ಜಾಗುತ್ತಿದ್ದರೇ ಇತ್ತ ವಾಡಿಕೆಯಂತೆ ಮಳೆಯಾಗದ ಹಿನ್ನೆಲೆ ಬರಗಾಲ ಉಂಟಾಗಿದ್ದು 195 ತಾಲ್ಲೂಕುಗಳನ್ನ ಈಗಾಗಲೇ ಬರಪೀಡಿತ ಎಂದು ಘೋಷಿಸಲಾಗಿದೆ. ಹೀಗಾಗಿ ಈ ಬಾರಿ ಮೈಸೂರು ದಸರಾ ಆಚರಣೆ ಸರಳವಾಗಿ ನಡೆಯಲಿದೆ.

ಈ ಹಿಂದೆ 13 ಬಾರಿ‌ ಸರಳವಾಗಿ ದಸರಾ ಆಚರಣೆ ಮಾಡಲಾಗಿತ್ತು. ರಾಜವಂಶಸ್ಥರ ನಿಧನ, ನಟ ಸಾರ್ವಭೌಮ ಡಾ ರಾಜ್‌ಕುಮಾರ್ ಅಪಹರಣ, ಹಾಗೂ ವಿವಿಧ ಕಾಲದಲ್ಲಿ ಆವರಿಸಿದ ಬರದ ಛಾಯೆ ಹಿನ್ನೆಲೆ ಸರಳ‌ ದಸರಾ ಆಚರಣೆ ಮಾಡಲಾಗಿತ್ತು.

1972 1973ರಲ್ಲಿ ಬರಗಾಲ, 1974ರಲ್ಲಿ ಜಯ ಚಾಮರಾಜ ಒಡೆಯರ್ ನಿಧನ, 1983,1992,1997ರಲ್ಲಿ ಬರಗಾಲ, 2000ರಲ್ಲಿ ವರನಟ ಡಾ ರಾಜ್ ಅಪಹರಣ ಹಿನ್ನೆಲೆ ಈ ವರ್ಷಗಳಲ್ಲಿ ಸರಳ ದಸರಾ ಆಚರಣೆ ಮಾಡಲಾಗಿತ್ತು. ಅಲ್ಲದೆ ಕೊರೊನಾ ಸಂಧರ್ಭದಲ್ಲೂ  ಎರಡು ವರ್ಷ ಸರಳ ದಸರಾ ಆಚರಣೆ ಮಾಡಲಾಗಿತ್ತು.

Key words: government – decided – celebrate – simple Dasara