Saturday, August 1, 2026

BDA Apartments

Home Front Page ಸರ್ಕಾರ ಸಿಡಿಗೆ ತಡೆಯಾಜ್ಞೆ ತರುವುದರಲ್ಲಿ, ಕಂಡವರ ಹೆಂಡತಿಯರ ಲೆಕ್ಕ ಹಾಕುವುದರಲ್ಲಿ ಬ್ಯುಸಿ : ರಾಜ್ಯ ಕಾಂಗ್ರೆಸ್...

ಸರ್ಕಾರ ಸಿಡಿಗೆ ತಡೆಯಾಜ್ಞೆ ತರುವುದರಲ್ಲಿ, ಕಂಡವರ ಹೆಂಡತಿಯರ ಲೆಕ್ಕ ಹಾಕುವುದರಲ್ಲಿ ಬ್ಯುಸಿ : ರಾಜ್ಯ ಕಾಂಗ್ರೆಸ್ ಟ್ವೀಟ್

ಬೆಂಗಳೂರು,ಏಪ್ರಿಲ್,06,2021(www.justkannada.in) : ಕಳೆದ ವರ್ಷ ಕೊರೊನಾ ಬಂದಾಗ ಸ್ವಿಮ್ಮಿಂಗ್ ಫೂಲ್‌ನಲ್ಲಿ ಮೋಜು ಮಾಡುತ್ತಿದ್ದರು. ಈ ಭಾರಿ ಕೊರೊನಾ ಉಲ್ಬಣಿಸಿದಾಗ ಸಿಡಿಗೆ ತಡೆಯಾಜ್ಞೆ ತರುವುದರಲ್ಲಿ, ಕಂಡವರ ಹೆಂಡತಿಯರ ಲೆಕ್ಕ ಹಾಕುವುದರಲ್ಲಿ ಬ್ಯುಸಿಯಾಗಿದ್ದಾರೆ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.Government-burst-injunction-bringing-who-seen-Wife-calculating-Busyಸಚಿವ ಸುಧಾಕರ್ ಆಂತರಿಕ ಕಚ್ಚಾಟ, ಸಿಡಿ ಕಳ್ಳಾಟದಲ್ಲಿ ಮುಳುಗಿದ ಬಿಜೆಪಿ ಸರ್ಕಾರ ಕೊರೊನಾ ನಿರ್ವಹಿಸುವುದರಲ್ಲಿ ಸೋತಿದೆ ಎಂದು ಕಿಡಿಕಾರಿದೆ.Sriramulu-son-CM-Serve-State-Congress-tweetಕೋವಿಡ್ ಟೆಸ್ಟ್ ಗಳನ್ನು ಕಡಿಮೆ ಮಾಡಿ ತಮ್ಮ ಬೆನ್ನನ್ನು ತಾವೇ ತಟ್ಟಿಕೊಂಡು ಕುಳಿತಿದ್ದರ ಪರಿಣಾಮ ಇದಾಗಿದೆ. ಸಂಪೂರ್ಣ ಟ್ರಯಲ್ ಪ್ರಕ್ರಿಯೆ ಮುಗಿಸದ ವ್ಯಾಕ್ಸಿನ್ ಗಳ ಮಾರ್ಕೆಂಟಿಗ್ ಮಾಡುವುದರಲ್ಲಿ ಮುಳುಗಿದ್ದರ ಪರಿಣಾಮವಿದು. ಕೊರೊನಾ ಹೆಸರಲ್ಲಿ ಭ್ರಷ್ಟಾಚಾರ ನಡೆಸಿದ್ದರ ಪರಿಣಾಮ ಇದು. ಇಂದು ಸೋಂಕು ದಾಖಲೆ ಮಟ್ಟಕ್ಕೇರಿದೆ ಎಂದು ಆಕ್ರೋಶವ್ಯಕ್ತಪಡಿಸಿದೆ.

key words : Government-burst-injunction-bringing-who-seen-Wife-calculating-Busy