Wednesday, August 19, 2026

BDA Apartments

Home Front Page ಬಿಜೆಪಿ ಶಾಸಕರಿಂದ ಗೂಂಡಾ ಸಂಸ್ಕೃತಿ: ರೌಡಿಶೀಟ್ ತೆರೆಯಬೇಕು- ಎಂಎಲ್ ಸಿ ಐವನ್ ಡಿಸೋಜ

ಬಿಜೆಪಿ ಶಾಸಕರಿಂದ ಗೂಂಡಾ ಸಂಸ್ಕೃತಿ: ರೌಡಿಶೀಟ್ ತೆರೆಯಬೇಕು- ಎಂಎಲ್ ಸಿ ಐವನ್ ಡಿಸೋಜ

ಮಂಗಳೂರು,ಆಗಸ್ಟ್,23,2024 (www.justkannada.in): ಬಿಜೆಪಿ ಶಾಸಕರು ಗೂಂಡಾ ಸಂಸ್ಕೃತಿ ತೋರುತ್ತಿದ್ದಾರೆ.  ವೇದವ್ಯಾಸ ಕಾಮತ್ ಮತ್ತು ಭರತ್ ಶೆಟ್ಟಿ ಗೂಂಡಾಗಿರಿ ಮಾಡುತ್ತಿದ್ದಾರೆ ಎಂದು ವಿಧಾನಪರಿಷತ್ ಕಾಂಗ್ರೆಸ್ ಸದಸ್ಯ ಐವನ್ ಡಿಸೋಜ ಕಿಡಿಕಾರಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಐವನ್ ಡಿಸೋಜ,  ಗೂಂಡಾ ಸಂಸ್ಕೃತಿ ತೋರುತ್ತಿರುವ  ಬಿಜೆಪಿ ಶಾಸಕರ ಮೇಲೆ ರೌಡಿ ಶೀಟ್ ತೆರೆಯಬೇಕು. ವೇದವ್ಯಾಸ ಕಾಮತ್ ಭರತ್ ಶೆಟ್ಟಿ ಗೂಂಡಾ ವರ್ತನೆ ತೋರುತ್ತಿದ್ದಾರೆ. ವೇದವ್ಯಾಸ್ ಕಾಮತ್ ಗೆ ಶಾಲಾ ಮಕ್ಕಳ ಶಾಪವಿದೆ.  ಶಾಲೆ ವಿಚಾರದಲ್ಲಿ ಕಾಮತ್ ರಾಜಕೀಯ ಮಾಡಿದ್ದಾರೆ.  ಕಾಮತ್, ಭರತ್ ಶೆಟ್ಟಿ ವಿರುದ್ದ ರೌಡಿ ಶೀಟ್ ತೆರೆಯಬೇಕು ಎಂದು ಆಗ್ರಹಿಸಿದರು.

ರಾಜ್ಯಪಾಲರ ವಿರುದ್ದ ಅವಹೇಳನಕಾರಿ ಹೇಳಿಕೆ ನೀಡಿದ್ದ ಆರೋಪ ಹಿನ್ನೆಲೆ ಐವನ್ ಡಿಸೋಜ ವಿರುದ್ದ ಬಿಜೆಪಿ ನಾಯಕರು ಪ್ರತಿಭಟನೆ ನಡೆಸಿದ್ದರು. ಈ ಮಧ್ಯೆ ದುಷ್ಕರ್ಮಿಗಳು ಐವನ್ ಡಿಸೋಜ ಮನೆ ಮೇಲೆ ಕಲ್ಲು ತೂರಿದ್ದರು.

Key words: Goonda culture, BJP, MLAs, MLC, Ivan D’Souza