ರಾಜ್ಯದ ಜನರಿಗೆ ಗುಡ್ ನ್ಯೂಸ್ : ಮನೆ ಮನೆಗೆ ಪಡಿತರ ವಿತರಣೆ.

ಬೆಂಗಳೂರು,ನವೆಂಬರ್,1,2021(www.justkannada.in) ರಾಜ್ಯದ ಪಡಿತರ ಚೀಟಿ ಹೊಂದಿರುವ ಜನತೆಗೆ ಇನ್ಮುಂದೆ ಮನೆಮನೆಗೆ ಪಡಿತರ ವಿತರಣೆ ಮಾಡಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ.jk

ಈ ಮೂಲಕ ಜನರಿಗೆ ಸಿಎಂ ಬೊಮ್ಮಾಯಿ ಸಿಹಿ ಸುದ್ಧಿ ನೀಡಿದ್ದಾರೆ. ಇನ್ಮುಂದೆ ಪಡಿತರ ಸಾಮಾಗ್ರಿಗಳನ್ನು ಜನತೆಯ ಮನೆ ಬಾಗಿಲಿಗೆ ತಲುಪಲಿದೆ. ಇದರಿಂದ ಪಡಿತರ ಅಂಗಡಿ ಮುಂದೆ ಸಾಲು ನಿಲ್ಲುವುದು ತಪ್ಪಲಿದೆ. ನ. 26 ರಿಂದ ಮನೆ ಮನೆಗೆ ರೇಷನ್ ವಿತರಣೆ ಮಾಡಲಾಗುವುದು.

ಮೊದಲ ಹಂತದಲ್ಲಿ ಬೆಂಗಳೂರಿನಲ್ಲಿ ಮನೆಮನೆಗೆ ರೇಷನ್ ಕಾರ್ಯಕ್ರಮ ಜಾರಿ ಮಾಡಲಾಗುವುದು. 18 ಕ್ಷೇತ್ರಗಳಲ್ಲಿ ಮನೆ ಮನೆಯ ವಿಳಾಸ ಪಡೆದು ಪಡಿತರ ವಿತರಣೆ ಮಾಡಲಾಗುವುದು ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.jk

Key words: Good news – people – state-Distribution -rations – house to house