ಸಾವಿನಲ್ಲೂ ನಟ ಪುನೀತ್ ರಾಜ್ ಕುಮಾರ್ ಸಾರ್ಥಕತೆ : ಎರಡು ಕಣ್ಣುಗಳ ದಾನ ಮಾಡಿ ನಾಲ್ವರ ಬಾಳಲ್ಲಿ ಬೆಳಕಾದ ಅಪ್ಪು.

ಬೆಂಗಳೂರು, ನವೆಂಬರ್,1,2021(www.justkannada.in): ನಟ ಪುನೀತ್ ರಾಜ್ ಕುಮಾರ್  ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದು, ಎರಡು ಕಣ್ಣುಗಳನ್ನ ದಾನಮಾಡಿ ನಾಲ್ವರ ಬಾಳಲ್ಲಿ ಬೆಳಕಾಗಿದ್ದಾರೆ.

ಹೌದು . ಪುನೀತ್ ರಾಜ್ ಕುಮಾರ್ ಅವರ ಎರಡು ಕಣ್ಣುಗಳಿಂದ ನಾಲ್ವರಿಗೆ ಅತ್ಯಾಧುನಿಕ ಹೊಸ ತಂತ್ರಜ್ಞಾನ ಮೂಲಕ ದೃಷ್ಟಿ ನೀಡಲಾಗಿದೆ. ಈ ಕುರಿತು ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ  ನಾರಾಯಣ ನೇತ್ರಾಲಯ ಮುಖ್ಯಸ್ಥ ಡಾ ಭುಜಂಗ ಶೆಟ್ಟಿ, ಎರಡು ಕಣ್ಣುಗಳನ್ನು ಭಾಗಗಳನ್ನಾಗಿ ಮಾಡಿ ನಾಲ್ವರಿಗೆ ದೃಷ್ಟಿಯನ್ನು ನೀಡಲಾಗಿದೆ. ಸಾಮಾನ್ಯವಾಗಿ ನೇತ್ರದಾನ ಮಾಡಿದವರ ಕಣ್ಣುಗಳನ್ನು ಇಬ್ಬರಿಗೆ ನೀಡುತ್ತೇವೆ. ಆದರೆ ಅಪ್ಪು ಅವರ ಕಣ್ಣುಗಳನ್ನು ಶಸ್ತ್ರಚಿಕಿತ್ಸೆ ಮಾಡಿ ನಾಲ್ವರಿಗೆ ದೃಷ್ಠಿ ನೀಡಿದ್ದೇವೆ. ಅತ್ಯಾಧುನಿಕ ಶಸ್ತ್ರಚಿಕಿತ್ಸೆ ಮೂಲಕ ಈ ರೀತಿ ಮಾಡಲಾಗಿದೆ. ನಮಗೆ ನಮ್ಮ ಪ್ರಯತ್ನದಲ್ಲಿ ಯಶಸ್ಸು ಸಿಕ್ಕಿದ್ದು ಬಹಳ ಖುಷಿಯಾಗುತ್ತಿದೆ ಎಂದಿದ್ದಾರೆ.

2006ರಲ್ಲಿ ನಟ ಡಾ.ರಾಜ್ ಕುಮಾರ್ ಅವರು  ನೇತ್ರದಾನ ಮಾಡಿದ್ದರು. 2017ರಲ್ಲಿ ಪಾರ್ವತಮ್ಮ ಅವರು ನೇತ್ರದಾನ ಮಾಡಿದ್ದರು. ಈಗ ಪುನೀತ್ ರಾಜ್ ಕುಮಾರ್ ನೇತ್ರದಾನ ಮಾಡಿ ನಾಲ್ವರ ಬಾಳಲ್ಲಿ ಬೆಳಕಾಗಿದ್ದಾರೆ. ರಾಜ್ ಕುಮಾರ್ ಕುಟುಂಬಕ್ಕೆ ಧನ್ಯವಾದಗಳು ಎಂದು ಭುಜಂಗಶೆಟ್ಟಿ ತಿಳಿಸಿದ್ದಾರೆ.

Key words: Actor -Puneet Raj Kumar – Donate- two eyes-four

ENGLISH SUMMARY..

Puneeth’s both eyes donated: Lights up lives of four
Bengaluru, November 1, 2021 (www.justkannada.in): Sandalwood star Puneeth Rajkumar has lightened the lives of four persons even after his death by donating both his eyes.
Yes, four people can now see the world through advanced technology through Puneeth Rajkumar’s eyes. Addressing a press meet at Bengaluru today, Dr. Bhujanga Shetty of the Narayana Netralaya explained that the two eyes of Puneeth Rajkumar were divided into four parts and implanted among four persons who are now able to see the world. “Usually, two eyes will be implanted in two persons. But the new advanced technology has helped four people to see the world with Puneeth Rajkumar’s two eyes. Our efforts have yielded fruits, and we are happy about it,” he said.
It can be recalled that Dr. Rajkumar had also donated both his eyes in the year 2006. Likewise, in 2017, Dr. Rajkumar’s wife, Parvathamma’s eyes were also donated. Now Puneeth Rajkumar has given light to four persons. “We extend our heartfelt thanks to Dr. Rajkumar’s family,” he added.
Keywords: Puneeth Rajkumar/ eyes donated/ lightened four persons/ Dr. Bhujang Shetty