ನಿವೇಶನಗಳ ಮಾಲೀಕರಿಗೆ ಮುಡಾದಿಂದ ಗುಡ್ ನ್ಯೂಸ್.

ಮೈಸೂರು,ಜನವರಿ,1,2022(www.justkannada.in) ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಮಂಜೂರು ಮಾಡಿರುವ ನಿವೇಶನಗಳ ಮಾಲೀಕರುಗಳಿಗೆ ಹೊಸ ವರ್ಷದಂದು ಶುಭಸುದ್ದಿ ಸಿಕ್ಕಿದೆ.

ಹೌದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಮಂಜೂರು ಮಾಡಿರುವ ನಿವೇಶನಗಳ ಮಾಲೀಕರು ತಮ್ಮ ನಿವೇಶನಗಳಲ್ಲಿ ಸ್ವಂತ ಮನೆ ಕಟ್ಟಡ ನಿರ್ಮಿಸಲು ರಾಷ್ಟ್ರೀಕೃತ ಬ್ಯಾಂಕ್‌ ಗಳಿಂದ ಸಾಲ ಪಡೆಯಲು ಅಗತ್ಯವಿರುವ ನಿರಾಕ್ಷೇಪಣಾ ಪತ್ರವನ್ನು ನೀಡಲು ಮುಡಾ ಕ್ರಮಕೈಗೊಳ್ಳುತ್ತಿದೆ.

ಇದುವರೆವಿಗೆ ನಿರಾಕ್ಷೇಪಣಾ ಪತ್ರ ಪಡೆಯಲು ಆಗಿರುವ ಸಮಸ್ಯೆಗಳಿಂದ ಹಲವಾರು ವರ್ಷಗಳಿಂದ ಸ್ವಂತ ಮನೆ ನಿರ್ಮಿಸಲು ಸಾಧ್ಯವಾಗದಿರುವ ನಿವೇಶನದಾರರು 2022 ಜನವರಿ 01 ಶುಭಸುದ್ದಿಯೊಂದಿಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವನ್ನು ಸಂಪರ್ಕಿಸಿ ನಿರಾಕ್ಷೇಪಣಾ ಪತ್ರವನ್ನು ಸರಳವಾಗಿ ಹಾಗೂ ಸುಲಭವಾಗಿ ಪಡೆಯಬೇಕೆಂದು ಮುಡಾ ಅಧ್ಯಕ್ಷರು ತಿಳಿಸಿದ್ದಾರೆ.

Key words: Good news – Muda –mysore-sites – owners

ENGLISH SUMMARY…

MUDA gives good news to site owners
Mysuru, January 1, 2022 (www.justkannada.in): The Mysore Urban Development Authority (MUDA) has given a good news for all the site owners.
MUDA has started the process of granting No Objection Certificates to all the site owners to construct own houses. Many people who had purchased sites from the MUDA were not able to construct houses in their sites due to the delay in granting NOC from MUDA. However, MUDA has given a good news on the occasion of the new year. All those who are seeking NOCs are asked to contact the MUDA office and obtain them, according to the MUDA Chairman.
Keywords: MUDA/ site owners/ good news/ NOC