ಕೆಎಸ್ ಆರ್ ಟಿಸಿ ಸಿಬ್ಬಂದಿಗೆ ಸಿಹಿಸುದ್ಧಿ: 50 ಲಕ್ಷ ರೂ. ಅಪಘಾತ ವಿಮೆ ಯೋಜನೆ ಜಾರಿ.

ಬೆಂಗಳೂರು,ಅಕ್ಟೋಬರ್,19,2022(www.justkannada.in):  ಕೆಎಸ್​​ಆರ್​​ಟಿಸಿ  ಸಿಬ್ಬಂದಿಗೆ ರಾಜ್ಯ ಸರ್ಕಾರ ಭರ್ಜರಿ  ಸಿಹಿ ಸುದ್ಧಿ ನೀಡಿದ್ದು, ಮೊದಲ ಬಾರಿಗೆ ಕೆಎಸ್ ​​ಆರ್ ​​ಟಿಸಿ ಸಿಬ್ಬಂದಿಗೆ 50 ಲಕ್ಷ ರೂ ಅಪಘಾತ ವಿಮೆ ಯೋಜನೆ  ಜಾರಿ ಮಾಡಿದೆ.

ಕೆಎಸ್ ​​ಆರ್​​ ಟಿಸಿ ನಿಗಮ ವಿಮಾ ಯೋಜನೆಗೆ ಎಸ್ ​ಬಿಐ ಬ್ಯಾಂಕ್ ​​ನೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ. ಈ ಒಡಂಬಡಿಕೆಗೆ ಕೆಎಸ್ ಆರ್ ಟಿಸಿ ಅಧ್ಯಕ್ಷ ಎಂ.ಚಂದ್ರಪ್ಪ ಅವರ ಸಮ್ಮುಖದಲ್ಲಿ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಬುಕುಮಾರ್ ಹಾಗೂ ಎಸ್‌ಬಿಐ ಡಿಜಿಎಂ ಪಂಕಜ್ ತಪ್ಲಿಯಾಲ್ ಸಹಿ ಹಾಕಿದರು.

Key words: Good news – KSRTC –staff-Rs 50 lakh- accident- insurance- scheme.