ರವಿಚಂದ್ರನ್ ಅಭಿಮಾನಿಗಳಿಗೆ ಖುಷಿ ಸುದ್ದಿ! ಸೋಷಿಯಲ್ ಮೀಡಿಯಾಗೆ ರವಿಮಾಮ ಎಂಟ್ರಿ!

ಬೆಂಗಳೂರು, ಏಪ್ರಿಲ್ 06, 2021 (www.justkannada.in):

ನಟ ರವಿಚಂದ್ರನ್​ ಸೋಷಿಯಲ್ ಮೀಡಿಯಾಗೆ ಎಂಟ್ರಿ ಕೊಡುತ್ತಿದ್ದಾರೆ!

ಹೌದು, ಅಭಿಮಾನಿಗಳ ನೆಚ್ಚಿನ ರವಿಮಾಮಾ ಸಾಮಾಜಿಕ ಜಾಲತಾಣಕ್ಕೆ ಎಂಟ್ರಿ ನೀಡಲು ಸಜ್ಜಾಗಿದ್ದಾರೆ.

ಫೇಸ್​ಬುಕ್​, ಇನ್​ಸ್ಟಾಗ್ರಾಮ್​, ಟ್ವಿಟರ್​ ಮತ್ತು ಯೂಟ್ಯೂಬ್​ ನಲ್ಲಿ ಏಕಕಾಲಕ್ಕೆ ಅಧಿಕೃತ ಖಾತೆಗಳನ್ನು ರವಿಚಂದ್ರನ್ ತೆರೆಯಲಿದ್ದಾರೆ.

ಏ.13ರಂದು ಯುಗಾದಿ ಹಬ್ಬದ ಪ್ರಯುಕ್ತ ಅವರು ಸೋಶಿಯಲ್​ ಮೀಡಿಯಾ ಖಾತೆಗಳನ್ನು ತೆರೆಯಲಿದ್ದಾರೆ.

ಸ್ಯಾಂಡಲ್​ವುಡ್​ನಲ್ಲಿ ಅನೇಕ ಹೊಸ ಟ್ರೆಂಡ್​ಗಳನ್ನು ಸೆಟ್​ ಮಾಡಿದ ರವಿಚಂದ್ರನ್ ಸೋಷಿಯಲ್ ಮೀಡಿಯಾಗಳಲ್ಲಿ ಇಲ್ಲದಿರುವುದರಿಂದ ಅಭಿಮಾನಿಗಳು ಬೇಸರಿಸಿಕೊಂಡಿದ್ದರು. ಕೆಲವರು ನಕಲಿ ಖಾತೆಗಳನ್ನು ಫಾಲೋ ಮಾಡುತ್ತಿದ್ದರು. ಇದೀಗ ಅಧಿಕೃತವಾಗಿ ಸಾಮಾಜಿಕ ಜಾಲತಾಣಗಳನ್ನು ರವಿಚಂದ್ರನ್ ಬಳಸಲಿದ್ದಾರೆ.