ಬ್ಯಾಂಕ್ ಠೇವಣಿದಾರರಿಗೆ ಬಜೆಟ್ ನಲ್ಲಿ ಭರ್ಜರಿ ಗುಡ್ ನ್ಯೂಸ್ …

ನವದೆಹಲಿ,ಫೆಬ್ರವರಿ,1,2021(www.justkannada.in) ಬ್ಯಾಂಕ್ ಠೇವಣಿದಾರರಿಗೆ ಕೇಂದ್ರ ಬಜೆಟ್ ನಲ್ಲಿ ಗುಡ್ ನ್ಯೂಸ್ ನೀಡಲಾಗಿದೆ. ಗ್ರಾಹಕರ ಬಂಡವಾಳದ ಭದ್ರತಾ ವಿಮೆಯನ್ನು ಒಂದು ಲಕ್ಷದಿಂದ 5 ಲಕ್ಷಕ್ಕೆ ಏರಿಕೆ ಮಾಡುವುದಾಗಿ ಕೇಂದ್ರ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿದ್ದಾರೆ.jk

ಠೇವಣಿದಾರರ ಹಣಕ್ಕೆ ಸುರಕ್ಷತೆ ನೀಡುವ ಭರವಸೆಯನ್ನು. ಸರ್ಕಾರಿ ಬ್ಯಾಂಕ್​ಗಳಿಗೆ 20,000 ಕೋಟಿ ಹೊಸ ಬಂಡವಾಳ ಮರುಪೂರಣವನ್ನು ಇಂದಿನ ಕೇಂದ್ರ ಬಜೆಟ್ ನಲ್ಲಿ ಮಾಡಲಾಗಿದೆ.

ಸರ್ಕಾರಿ ಬ್ಯಾಂಕ್​ಗಳಿಗೆ 20,000 ಕೋಟಿ ಹೊಸ ಬಂಡವಾಳ ಮರುಪೂರಣ ಮಾಡಲಾಗುತ್ತದೆ ಎಂಬುದಾಗಿ ಘೋಷಿಸುವ ಮೂಲಕ, ಬ್ಯಾಂಕ್ ಠೇವಣಿದಾರರಿಗೆ ಬಿಗ್ ರಿಲೀಫ್ ನೀಡಿದ್ದಲ್ಲದೇ, 1 ಲಕ್ಷ ಇದ್ದ ಠೇವಣಿ ಹಣವನ್ನು 5 ಲಕ್ಷದವರೆಗೆ ಏರಿಕೆ ಮಾಡಿರುವುದಾಗಿ ಘೋಷಿಸಿದರು.Good news - budget -bank depositors.

ಇನ್ನು ಏರ್ ಇಂಡಿಯಾ, ಐಡಿಬಿಐಎ ಬ್ಯಾಂಕ್, ಬಿಇಎಂಎಲ್, ಶಿಪ್ಪಿಂಗ್ ಕಾರ್ಪೋರೇಶನ್ ನಲ್ಲಿ ನ ಹೂಡಿಕೆ ಹಿಂತೆಗೆತ ಯಶಸ್ವಿ. ಕಾಲಮಿತಿಯಲ್ಲಿ ನಷ್ಟದಲ್ಲಿರುವ ಕೈಗಾರಿಕೆ ಕಂಪನಿಗಳನ್ನು ಮುಚ್ಚಲಿದ್ದೇವೆ. ಎಂಎಸ್ ಎಂಇಗಳಿಗೆ ನೆರವು ನೀಡಲು ಎಐ, ಎಂಎಲ್ ತಂತ್ರಜ್ಞಾನ ಬಳಸಲಿದ್ದೇವೆ ಎಂದು ತಿಳಿಸಿದರು.

Key words: Good news – budget -bank depositors.