ಚಿನ್ನ ಮಿಶ್ರಿತ ಮಣ್ಣು ಕದಿಯುತ್ತಿದ್ದ 8 ಮಂದಿ ಅಂದರ್

ಕೋಲಾರ,ಫೆಬ್ರವರಿ,19,2026 (www.justkannada.in):  ಕೋಲಾರದ ಕೆಜಿಎಫ್ ಚಿನ್ನದ ಗಣಿಯಲ್ಲಿ ಚಿನ್ನ ಮಿಶ್ರಿತ ಮಣ್ಣು ಕದಿಯುತ್ತಿದ್ದ ಎಂಟು ಜನರನ್ನು ಪೊಲೀಸರು ಬಂಧಿಸಿದ್ದಾರೆ.

ಕೋಲಾರ ಜಿಲ್ಲೆಯ ಕೆ.ಜಿ.ಎಫ್ ನ ಉರಿಗಂ ಠಾಣೆ ಪೊಲೀಸರು ಎಂಟು ಜನರನ್ನು ಬಂಧಿಸಿದ್ದಾರೆ. ಆರೋಪಿಗಳು ಗಿಫ್ಟಾರ್ಟ್ ಶಾಪ್ಟ್ ನಲ್ಲಿ ಚಿನ್ನ ಮಿಶ್ರಿತ ಮಣ್ಣನ್ನು ಕದಿಯುತ್ತಿದ್ದರು ಎನ್ನಲಾಗಿದೆ.  ಎಂಟು ಚೀಲಗಳಲ್ಲಿ ತುಂಬಿದ 40 ಸಾವಿರ ರೂ. ಮೌಲ್ಯದ ಚಿನ್ನ ಮಿಶ್ರಿತ ಮಣ್ಣನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ಈ ಸಂಬಂಧ ಉರಿಗಾಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: 8 people, arrested , stealing, gold-mixed soil , Kolar