Friday, August 14, 2026

BDA Apartments

Home Front Page ರಾಜ್ಯವನ್ನ ಪಂಜಾಬ್ ಮಾಡಲು ಹೊರಟಿದ್ದಾರೆ- ಸಿದ್ಧರಾಮಯ್ಯ ವಿರುದ್ಧ ಸಚಿವ ಶ್ರೀರಾಮುಲು ವಾಗ್ದಾಳಿ.

ರಾಜ್ಯವನ್ನ ಪಂಜಾಬ್ ಮಾಡಲು ಹೊರಟಿದ್ದಾರೆ- ಸಿದ್ಧರಾಮಯ್ಯ ವಿರುದ್ಧ ಸಚಿವ ಶ್ರೀರಾಮುಲು ವಾಗ್ದಾಳಿ.

ಬೆಂಗಳೂರು,ಅಕ್ಟೋಬರ್,12,2021(www.justkannada.in): ರಾಜ್ಯವನ್ನ ಸಿದ್ಧರಾಮಯ್ಯ ಪಂಜಾಬ್ ಮಾಡಲು ಹೊರಟಿದ್ದಾರೆ. ಪಂಜಾಬ್ ನಲ್ಲೊಬ್ಬ, ಇಲ್ಲೊಬ್ಬ ಸಿದ್ಧು ಇದ್ದಾರೆ. ಅಲ್ಲೂ ಸಿದ್ಧು ಕ್ಯಾಪ್ಟನ್, ಇಲ್ಲೂ ಸಿದ್ಧು ಕ್ಯಾಪ್ಟನ್ ಎಂದು ಸಾರಿಗೆ ಸಚಿವ ಶ್ರೀರಾಮುಲು ಲೇವಡಿ ಮಾಡಿದರು.

ಮಾಧ್ಯಮಗಳ ಜತೆ ಇಂದು ಮಾತನಾಡಿದ ಸಚಿವ ಶ್ರೀರಾಮುಲು, ಕಾಂಗ್ರೆಸ್ ನವರಿಗೆ  ಸಿಂದಗಿ, ಹಾನಗಲ್ ಉಪಚುನಾವಣೆಯಲ್ಲಿ ಸೋಲುವ ಹತಾಶೆ ಉಂಟಾಗಿದೆ. ಸಿದ್ಧರಾಮಯ್ಯ 20 ಸಲ ಸೋಲುವ ಹೇಳಿಕೆ ನೀಡಿದ್ದಾರೆ. ಚುನಾವಣೆ ಬಂದಾಗ ಮಾತ್ರ ಸಿದ್ಧರಾಮಯ್ಯಗೆ ಅಹಿಂದ ನೆನಪು. ಚುನಾವಣೆ ಮುಗಿದ ಬಳಿಕ ಅಹಿಂದ ಮರೆತು ಹೋಗುತ್ತದೆ ಎಂದು ವ್ಯಂಗ್ಯವಾಡಿದರು.

Key words: going – make- Punjab- Siddaramaiah – Minister -Sriramulu.