Wednesday, August 19, 2026

BDA Apartments

Home Cinema ಎಆರ್ ರೆಹಮಾನ್ ಪುತ್ರಿ ಅನಿಮೇಟೆಡ್ ಸಂಗೀತ ವಿಡಿಯೋಗೆ ಜಾಗತಿಕ ಪ್ರಶಸ್ತಿ

ಎಆರ್ ರೆಹಮಾನ್ ಪುತ್ರಿ ಅನಿಮೇಟೆಡ್ ಸಂಗೀತ ವಿಡಿಯೋಗೆ ಜಾಗತಿಕ ಪ್ರಶಸ್ತಿ

ಬೆಂಗಳೂರು, ನವೆಂಬರ್ 10, 2021 (www.justkannada.in): ಎಆರ್ ರೆಹಮಾನ್ ಅವರ ಪುತ್ರಿ ಖತಿಜಾ ಅವರ ಅನಿಮೇಟೆಡ್ ಸಂಗೀತ ವಿಡಿಯೋ ಜಾಗತಿಕ ಮಟ್ಟದಲ್ಲಿ ಅತ್ಯುತ್ತಮ ಅನಿಮೇಟೆಡ್ ಸಂಗೀತ ವಿಡಿಯೋ ಪ್ರಶಸ್ತಿಗೆ ಭಾಜನವಾಗಿದೆ.

ಈ ಕುರಿತ ಸುದ್ದಿಯನ್ನು ಸ್ವತಃ ಎಆರ್ ರೆಹಮಾನ್ ಟ್ವೀಟ್ ಮಾಡಿದ್ದು, ಫರಿಶ್ಟನ್ ಮತ್ತೊಂದು ಅಂತಾರಾಷ್ಟ್ರೀಯ ಪ್ರಶಸ್ತಿಯನ್ನು ಗಳಿಸಿದೆ ಎಂದು ಟ್ವೀಟ್ ಮಾಡಿದ್ದಾರೆ.

ಫರಿಶ್ಟನ್ ಎಂಬ ಹೆಸರಿನ ಅನಿಮೇಟೆಡ್ ಸಂಗೀತ ವಿಡಿಯೋಗೆ ಎಆರ್ ರೆಹಮಾನ್ ಪುತ್ರಿ ಖತಿಜಾ ಅಂತರರಾಷ್ಟ್ರೀಯ ಸೌಂಡ್ ಫ್ಯೂಚರ್ ಪ್ರಶಸ್ತಿಯನ್ನು ಗಳಿಸಿದ್ದಾರೆ.

ಸಂಗೀತ ವಿಡಿಯೋಗೆ ಎಆರ್ ರೆಹಮಾನ್ ಅವರೇ ಸಂಗೀತ ನಿರ್ದೇಶಕ, ನಿರ್ಮಾಪಕರಾಗಿರುವುದರಿಂದ ಈ ಪ್ರಶಸ್ತಿ ತಾಂತ್ರಿಕವಾಗಿ ರೆಹಮಾನ್ ಗೆ ಸೇರುತ್ತದೆ. ಆದರೆ ರೆಹಮಾನ್ ಅವರು ಈ ವಿಡಿಯೋದ ಸಂಪೂರ್ಣ ಕೀರ್ತಿಯನ್ನು ಮಗಳಿಗೆ ಸಲ್ಲಿಸಿದ್ದಾರೆ.