Friday, August 14, 2026

BDA Apartments

Home Front Page ಸಿ.ಪಿ ಯೋಗೇಶ್ವರ್ ಸಚಿವ ಸ್ಥಾನ ನೀಡುವ ವಿಚಾರ:  ರಾಮನಗರ ಬಿಜೆಪಿ ಜಿಲ್ಲಾಧ್ಯಕ್ಷರಿಂದಲೇ ವಿರೋಧ….

ಸಿ.ಪಿ ಯೋಗೇಶ್ವರ್ ಸಚಿವ ಸ್ಥಾನ ನೀಡುವ ವಿಚಾರ:  ರಾಮನಗರ ಬಿಜೆಪಿ ಜಿಲ್ಲಾಧ್ಯಕ್ಷರಿಂದಲೇ ವಿರೋಧ….

ಬೆಂಗಳೂರು,ಫೆ,4,2020(www.justkannada.in):  ಸಿ.ಪಿ ಯೋಗೇಶ್ವರ್ ಗೆ ಸಚಿವ ಸ್ಥಾನ ನೀಡಲು ಮೂಲ ಬಿಜೆಪಿಗರು ವಿರೋಧ ವ್ಯಕ್ತಪಡಿಸಿರುವ ಬೆನ್ನಲ್ಲೆ ಇದೀಗ ಸಿ.ಪಿ ಯೋಗೇಶ್ವರ್ ಅವರ ಜಿಲ್ಲೆ ರಾಮನಗರದಲ್ಲೇ ಆಕ್ಷೇಪ ಕೇಳಿ ಬಂದಿದೆ.

ಹೌದು, ಸಿ.ಪಿ ಯೋಗೇಶ್ವರ್ ಗೆ ಸಚಿವ ಸ್ಥಾನ ನೀಡದಂತೆ ರಾಮನಗರ ಜಿಲ್ಲಾಧ್ಯಕ್ಷ ರುದ್ರೇಶ್ ಅವರು ಸಿಎಂ ಬಿಎಸ್ ಯಡಿಯೂರಪ್ಪಗೆ ಮನವಿ ಮಾಡಿದ್ದಾರೆ ಎನ್ನಲಾಗುತ್ತಿದೆ. ಬೆಂಗಳೂರಿನಲ್ಲಿ ಇಂದು  ಸಿಎಂ ಬಿಎಸ್ ವೈ ಭೇಟಿಯಾಗಿ ರುದ್ರೇಶ್  ಈ ರೀತಿ ಮನವಿ ಸಲ್ಲಿಸಿದ್ದಾರೆ ಎನ್ನಲಾಗಿದೆ.

ಇನ್ನು ಸಿ.ಪಿ ಯೋಗೇಶ್ವರ್ ಅವರಿಗೆ ಮಂತ್ರಿಗಿರಿ ನೀಡಲು ಮೂಲಬಿಜೆಪಿಗರು ವಿರೋಧ ವ್ಯಕ್ತಪಡಿಸಿದ್ದು ಈ ಸಂಬಂಧ ನಿನ್ನೆ ಶಾಸಕರ ಭವನದಲ್ಲಿ ಸಭೆ ನಡೆಸಿ ಚರ್ಚಿಸಿದ್ದರು. ಸಭೆಯಲ್ಲಿ ಶಾಸಕರಾದ ಮುರುಗೇಶ್ ನಿರಾಣಿ, ಎಂಪಿ ರೇಣುಕಾಚಾರ್ಯ, ಪರಣ್ಣ ಮನಹಳ್ಳಿ,  ರಾಜುಗೌಡ ಮತ್ತಿತರರು ಉಪಸ್ಥಿತರಿದ್ದರು. ಈ ಸಭೆಯಲ್ಲಿ ರಾಮನಗರ ಜಿಲ್ಲಾಧ್ಯಕ್ಷ ರುದ್ರೇಶ್ ಇದ್ದರು ಎನ್ನಲಾಗುತ್ತಿದೆ.

Key words: giving -CP Yogeshwar – ministerial position-Opposition – Ramanagara- BJP -district- president.