ನನ್ನ ಬಾಯಿ ಮುಚ್ಚಿಸಲು ಸಾಧ್ಯವಿಲ್ಲ: ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನ ನೀಡಿದ್ರೆ ನಿಭಾಯಿಲು ಸಿದ್ಧ- ಎಂ.ಪಿ ರೇಣುಕಾಚಾರ್ಯ.

ದಾವಣಗೆರೆ,ಜುಲೈ,5,2023(www.justkannada.in):  ಮಾಜಿ ಶಾಸಕ ಎಂ.ಪಿ ರೇಣುಕಾಚಾರ್ಯ ಇದೀಗ ಮತ್ತೆ ಸ್ವಪಕ್ಷದವರ ವಿರುದ್ಧ ಕಿಡಿಕಾರಿದ್ದು, ನನ್ನ ಬಾಯಿ ಮುಚ್ಚಿಸಲು ಯಾರಿಂದಲೂ ಸಾಧ್ಯವಿಲ್ಲ ನೋಟಿಸ್ ಗೆ ಯಾವುದೇ ಉತ್ತರ ಕೊಡುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಎಂ.ಪಿ ರೇಣುಕಾಚಾರ್ಯ, ನಾನು ಮೋದಿ ವಿರುದ್ದ ಮಾತನಾಡಿದ್ದೇನಾ..?  11 ಜನರಿಗೆ ನೋಟಿಸ್ ನೀಡಿದ್ದೇವೆ ಎನ್ನುತ್ತಾರೆ. ಹೊರಗೆ ಬಂದು ನನಗೆ ಮಾತ್ರ ನೋಟಿಸ್ ನೀಡುತ್ತಾರೆ.  ಬಿಜೆಪಿಯಲ್ಲಿ ಶಿಸ್ತು ಸಮಿತಿ ಇದೆಯೇ ಗೊತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನನಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ನೀಡಿದರೇ ನಿಭಾಯಿಸಲು ಸಿದ್ಧ ಎಂದ ಎಂ.ಪಿ ರೇಣುಕಾಚಾರ್ಯ, ನಾನು ಕಾಂಗ್ರೆಸ್ ಪಕ್ಷಕ್ಕೆ ಹೋಗುವುದಿಲ್ಲ.  ಕಾಂಗ್ರೆಸ್ ಮುಖಂಡರ ಜೊತ ರಾಜಕೀಯ ಹೊರತಾದ ಸ್ನೇಹ ಸಂಬಂಧ ಇದೆ. ಶಾಮನೂರು ಶಿವಶಂಕರಪ್ಪ ಜೊತೆ ವಿಮಾದಲ್ಲಿ ಹೋಗಿದ್ದೆ. ಸಮಯ ಕೇಳಿ ಡಿ.ಕೆ ಶಿವಕುಮಾರ್, ಸಿದ್ದರಾಮಯ್ಯ ಬಳಿಯೂ ಚರ್ಚಿಸಿದ್ದೆ ಎಂದರು.

Key words:  given –state- BJP- president-position- MP Renukacharya.