ಹೆಚ್.ಡಿಕೆ ಮಾತಿನಲ್ಲಿ ಸತ್ಯವಿದೆ: ಇದೊಂದು ಕಮಿಷನ್, ಕಂಡಿಷನ್ ಸರ್ಕಾರ- ಎನ್.ರವಿ ಕುಮಾರ್ ಟೀಕೆ.

ಬೆಂಗಳೂರು,ಜುಲೈ,5,2023(www.justkannada.in):  ಸರ್ಕಾರದ ವಿರುದ್ದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರು ಮಾಡಿರುವ ಭ್ರಷ್ಟಾಚಾರ ಆರೋಪದ ಮಾತಿನಲ್ಲಿ ಸತ್ಯವಿದೆ. ಇದೊಂದು ಕಮಿಷನ್ ಕಂಡಿಷನ್ ಸರ್ಕಾರ ಎಂದು ವಿಧಾನಪರಿಷತ್ ಬಿಜೆಪಿ ಸದಸ್ಯ ಎನ್. ರವಿಕುಮಾರ್ ಟೀಕಿಸಿದರು.

ಇಂದು ಮಾಧ್ಯಮಗಳ  ಜೊತೆ ಮಾತನಾಡಿದ ಎನ್. ರವಿಕುಮಾರ್,  ಕಾಂಗ್ರೆಸ್ ಸರ್ಕಾರ ವರ್ಗಾವಣೆ ದಂಧೆಯಲ್ಲಿ ಮುಳುಗಿ ಹೋಗಿದೆ. ಹೆಚ್ ಡಿಕೆ ಹೇಳಿದ ಮಾತಿನಲ್ಲಿ ಸತ್ಯವಿದೆ  ಇದೊಂದು ಕಮಿಷನ್ ಸರ್ಕಾರ , ಕಂಡಿಷನ್ ಸರ್ಕಾರ’ ನಮಗೆ 40 ಪರ್ಸೆಂಟ್ ಸರ್ಕಾರ ಅಂದಿದ್ದರು. ಈಗ ಕಾಂಗ್ರೆಸ್ ಸರ್ಕಾರ 100% ಕಮಿಷನ್ ಸರ್ಕಾರ. ಐಎಎಸ್, ಕೆಎಎಸ್ ಅಧಿಕಾರಿಗಳಿಗೆ ಇಂತಿಷ್ಟು ಅಂತ ಫಿಕ್ಸ್ ಮಾಡಿದ್ದಾರೆ ಕಮಿಷನ್ ಇಲ್ಲದೇ ಕೆಲಸ ಆಗಲ್ಲ ಎಂದು ಆರೋಪಿಸಿದರು.

ಅಕ್ರಮ ಗೋ ಸಾಗಾಟ ಮಾಡುವವರ ವಿರುದ್ದ ಕ್ರಮ ಕೈಗೊಂಡಿಲ್ಲ. ಗೋ ಸಂರಕ್ಷಣೆ ವಿದೇಯಕ ಹಿಂಪಡೆಯುವ ಬಗ್ಗೆ ಸ್ಪಷ್ಟಪಡಿಸಲಿ ವಾಪಸ್ ಪಡೆಯುವುದಿದ್ದರೇ ಸರ್ಕಾರ ಕ್ಲಿಯರ್ ಕಟ್ ಆಗಿ ಹೇಳಲಿ  ತಮ್ಮ ನಿರ್ಧಾರ ಸ್ಪಷ್ಟವಾಗಿರಲಿ ಎಂದು ರವಿಕುಮಾರ್ ಕುಟುಕಿದರು.

Key words: commission-condition –congress-government-BJP-MLC- N. RaviKumar